ಮುಂದಿನ ವರ್ಷದಿಂದ ರಾತ್ರಿ 9 ಗಂಟೆ ನಂತರ ಎಟಿಎಂಗೆ ಹಣ ತುಂಬುವಂತಿಲ್ಲ: ಕೇಂದ್ರ
ಮುಂದಿನ ವರ್ಷದಿಂದ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ...

Published On :
ನವದೆಹಲಿ: ಮುಂದಿನ ವರ್ಷದಿಂದ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ನಂತರ ಎಟಿಎಂಗೆ ಹಣ ಭರ್ತಿ ಮಾಡುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದೆ.
ಇತ್ತೀಚಿಗೆ ಎಟಿಎಂಗೆ ಹಣಗೆ ಸಾಗಿಸುವ ವಾಹನಗಳ ಮೇಲೆ ದಾಳಿ, ಎಟಿಎಂ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಹಣ ಸಾಗಿಸುವ ವಾಹನಕ್ಕೆ ಇಬ್ಬರು ಸಶಸ್ತ್ರ ಗಾರ್ಡ್ ಗಳು ಕಡ್ಡಾಯವಾಗಿ ಇರಬೇಕು ಎಂದು ಹೇಳಿದೆ.
ಹೊಸ ಅಧಿಸೂಚನೆ ಪ್ರಕಾರ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 4 ಗಂಟೆಯೊಳಗೆ ಎಟಿಎಂಗೆ ಹಣ ತುಂಬಬೇಕು ಮತ್ತು ಎಟಿಎಂ ಹಣ ನಿರ್ವಹಣೆ ಮಾಡುವ ಖಾಸಗಿ ಕಂಪನಿಗಳು ಮಧ್ಯಾಹ್ನದೊಳಗೆಯೇ ಬ್ಯಾಂಕ್ ನಿಂದ ಹಣ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಈ ಹೊಸ ಅಧಿಸೂಚನೆ ಫೆಬ್ರವರಿ 8, 2019ರಿಂದ ಜಾರಿಗೆ ಬರಲಿದೆ.
ದೇಶಾದ್ಯಂತ ಖಾಸಗಿ ಕಂಪನಿಗಳ ಸುಮಾರು 8 ಸಾವಿರ ವಾಹನಗಳು ನಿತ್ಯ ಸುಮಾರು 15 ಸಾವಿರ ಕೋಟಿ ರುಪಾಯಿ ಹಣವನ್ನು ಬ್ಯಾಂಕ್ ಪರವಾಗಿ ಎಟಿಎಂಗೆ ತುಂಬುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


