ದೇಶ

ಕೇರಳ: ಮೀನು ಮಾರಾಟ ಮಾಡಿ ಟ್ರೋಲ್ ಗೊಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ ದಾನ

ಶಿಕ್ಷಣ ವೆಚ್ಚ ಭರಿಸಲು ಮೀನು ಮಾರಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಾಗಿದ್ದ 21 ವರ್ಷದ ಕಾಲೇಜ್ ವಿದ್ಯಾರ್ಥಿನಿ ಹನಾನ್ ಈಗ ಪ್ರವಾಹ ಪರಿಹಾರವಾಗಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1.5 ಲಕ್ಷ ಹಣವನ್ನು ನೀಡಿದ್ದಾರೆ,

ಕೇರಳ: ಮೀನು ಮಾರಾಟ ಮಾಡಿ ಟ್ರೋಲ್ ಗೊಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ ದಾನ
ಕೇರಳ ಮುಖ್ಯಮಂತ್ರಿ ಜೊತೆಗೆ ಹನಾನ್
Published On :

ಕೊಚ್ಚಿ: ಶಿಕ್ಷಣ ವೆಚ್ಚ ಭರಿಸಲು ಮೀನು ಮಾರಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಾಗಿದ್ದ   21 ವರ್ಷದ ಕಾಲೇಜ್ ವಿದ್ಯಾರ್ಥಿನಿ ಹನಾನ್  ಈಗ ಪ್ರವಾಹ ಪರಿಹಾರವಾಗಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ  1.5 ಲಕ್ಷ ಹಣವನ್ನು ನೀಡಿದ್ದಾರೆ.

ಶಿಕ್ಷಣ ವೆಚ್ಚಕ್ಕಾಗಿ ಹಲವು ಜನರು ಹಣ ನೀಡಿದ್ದಾರೆ. ಇದರಿಂದಾಗಿ ಆಕೆಯ ಕುಟುಂಬದ ನಿರ್ವಹಣಾ ವೆಚ್ಚ ಭರಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕ ರೀತಿಯಲ್ಲಿ ಹಂಚಿಕೆಯಾಗಿದೆ.

ಜನರಿಂದ ನಾನು ಹಣ ಪಡೆದಿದ್ದು, ಅಗತ್ಯವಿರುವ ಜನರಿಗೆ ಸಂತೋಷದಿಂದ ಅದನ್ನು ನೀಡುತ್ತಿರುವುದಾಗಿ ಹನಾನ್ ಹೇಳಿದ್ದಾರೆ. ಹನಾನ್ ವಾರಾಂತ್ಯ ಕಾರ್ಯಕ್ರಮಗಳಲ್ಲಿ ನಿರೂಪಕಿ ಹಾಗೂ ಹೂ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು, ಪರಿಹಾರ ಕಾರ್ಯಕ್ಕಾಗಿ ನೆರವು ನೀಡುವಂತೆ ಜನರಲ್ಲಿ ಆಕೆ ಮನವಿ ಮಾಡಿದ್ದಾಳೆ.

ಇಡುಕ್ಕಿ ಜಿಲ್ಲೆಯಲ್ಲಿನ ತೊಡುಪುಝಾದಲ್ಲಿ ಹನಾನ್  ಬಿ.ಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ಕಷ್ಟದ ಜೀವನದ    ಬಗ್ಗೆ ಮಲಯಾಳಂ ಡೈಲಿಯಲ್ಲಿ ಸುದ್ದಿ ವರದಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಯ ಕಷ್ಟದ ಜೀವನದ ಬಗ್ಗೆ ಶಂಕೆ  ವ್ಯಕ್ತಪಡಿಸಿದ್ದಾರೆ. ಇದು ನಕಲಿ ಎಂದು ಹೇಳುತ್ತಿದ್ದಾರೆ.

ಹನಾನ್ ಹೊರತುಪಡಿಸಿದಂತೆ ಸರ್ಕಾರಿ ನೌಕರರು, ಸಾಮಾಜಿಕ ಜಾಲತಾಣ ಗುಂಪುಗಳು, ವಿದ್ಯಾರ್ಥಿಗಳು, ನಟರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪರಿಹಾರ ನೀಡಲು ಮುಂದಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.