ಅಕ್ರಮ ಬಾಂಗ್ಲಾ, ರೋಹಿಂಗ್ಯ ವಲಸಿಗರನ್ನು ಕರೆತಂದಿದ್ದೇ ಕಾಂಗ್ರೆಸ್: ಜಿತೇಂದ್ರ ಸಿಂಗ್
ಭಾರತಕ್ಕೆ ಅಕ್ರಮ ಬಾಂಗ್ಲಾ, ರೋಹಿಂದ್ಯ ವಲಸಿಗರನ್ನು ಕರೆತಂದಿದ್ದೇ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.

Published On :
ಭಾರತಕ್ಕೆ ಅಕ್ರಮ ಬಾಂಗ್ಲಾ, ರೋಹಿಂದ್ಯ ವಲಸಿಗರನ್ನು ಕರೆತಂದಿದ್ದೇ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.
ಕಾದು ನೋಡಿ, ಅಸ್ಸಾಂ ನಲ್ಲಿ ಅಕ್ರಮ ಬಾಂಗ್ಲಾದೇಶಿಗಳನ್ನು ಗುರಿತಿಸಿರುವಂತೆ ರೋಹಿಂಗ್ಯ ಮುಸ್ಲಿಮರನ್ನೂ ಸಹ ಗುರುತಿಸಿ ದೇಶದಿಂದ ಹೊರಗೆ ಕಳಿಸಲಾಗುತ್ತದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಜಮ್ಮು-ಕಾಶ್ಮೀರದ ಬಗ್ಗೆಯೂ ಮಾತನಾಡಿರುವ ಜಿತೇಂದ್ರ ಸಿಂಗ್ , ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನ ಯಕರಿಗೆ ಜಮ್ಮು-ಕಾಶ್ಮೀರದಿಂದ ಹೊರ ಭಾಗದ ರಾಜ್ಯಗಳಿಂದ ತಮ್ಮ ಸೊಸೆಯಂದಿರನ್ನು ಕರೆತರುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ, ವರದಕ್ಷಿಣೆ, ಫ್ಲ್ಯಾಟ್ ಗಳನ್ನು ಪಡೆಯುವುದಕ್ಕೂ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ತಮ್ಮದೇ ಹೆಣ್ಣುಮಕ್ಕಳನ್ನು ಬೇರೆಡೆಗೆ ಮದುವೆ ಮಾಡಿ ಕಳಿಸಬೇಕಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ನಿರಾಕರಿಸುತ್ತಾರೆ.
ಇನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿಷಯದ ಬಗ್ಗೆ ಎಚ್ಚರಿಕೆ ವಹಿಸುವ ಜಮ್ಮು-ಕಾಶ್ಮೀರದ ಎನ್ ಸಿ, ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಮಾತ್ರ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲು ಸಹಕಾರಿಯಾಗುವಂತೆ ಬೇರೆಯವರಿಗೆ ಕೈಗಾರಿಕೆ ಸ್ಥಾಪನೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


