ದೇಶ

ಬಿಕೆ ಹರಿಪ್ರಸಾದ್ ಕುರಿತು ಪ್ರಧಾನಿ ಮೋದಿ ಹೇಳಿಕೆಯನ್ನು ರಾಜ್ಯ ಸಭಾ ಕಡತಗಳಿಂತ ತೆಗೆಯಲಾಗಿದೆ: ಇದು ಅಪರೂಪ!

ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಯನ್ನು ರಾಜ್ಯಸಭೆಯ...

ಬಿಕೆ ಹರಿಪ್ರಸಾದ್ ಕುರಿತು ಪ್ರಧಾನಿ ಮೋದಿ ಹೇಳಿಕೆಯನ್ನು ರಾಜ್ಯ ಸಭಾ ಕಡತಗಳಿಂತ ತೆಗೆಯಲಾಗಿದೆ: ಇದು ಅಪರೂಪ!
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಯನ್ನು ರಾಜ್ಯಸಭೆಯ ಕಡತದಿಂದ ಅಳಿಸಿ ಹಾಕಲಾಗಿದೆ.

ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ ವಿರುದ್ಧ ಸೋಲನುಭವಿಸಿದ್ದರು.

ಹರಿವಂಶ್ ಅವರ ಸುಲಭ ಗೆಲುವಿನ ನಂತರ ಸದನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಹರಿವಂಶ್ ಅವರಿಗೆ ಅಭಿನಂದನೆ ಹೇಳಿದರು. ಇಂದಿನ ಚುನಾವಣೆ ಇಬ್ಬರು ಹರಿಗಳ ನಡುವಿನದಾಗಿತ್ತು ಎಂದು ಹೇಳಿದ ಪ್ರಧಾನಿ ನಂತರ ಹರಿಪ್ರಸಾದ್ ಅವರ ಹೆಸರಿನ ಮೊದಲಿಗೆ ಇರುವ ಬಿ ಕೆ ಮೊದಲಕ್ಷರವನ್ನು ಟೀಕಿಸಿ ಮಾತನಾಡಿದ್ದರು. ಪ್ರಧಾನಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕೆರಳಿದ್ದರು.

ನಂತರ ಕೂಡಲೇ ಪ್ರಧಾನಿಯವರು ಹರಿಪ್ರಸಾದ್ ಅವರನ್ನು ಹೊಗಳಿ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡಿ ತಮ್ಮ ಜವಾಬ್ದಾರಿಯನ್ನು ಈಡೇರಿಸಿದ್ದಾರೆ ಎಂದಿದ್ದರು.
ಪ್ರಧಾನಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಬಿಕೆ ಹರಿಪ್ರಸಾದ್, ಪ್ರಧಾನಿಯವರು ತಮ್ಮ ಸ್ಥಾನದ ಮತ್ತು ಸದನದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದ್ದರು.

ಬಿಕೆ ಹರಿಪ್ರಸಾದ್ ಅವರ ಹೆಸರಿನ ಬಗ್ಗೆ ಮಾತನಾಡಿದ್ದ ಪ್ರಧಾನಿಯವರ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯಸಭೆಯ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ.

ಪ್ರಧಾನಿಯವರು ಸದನದಲ್ಲಿ ಮಾತನಾಡಿದ ಮಾತುಗಳನ್ನು ಅಳಿಸಿಹಾಕಿರುವುದು ಅಪರೂಪವಾದರೂ ಇದು ಮೊದಲ ಸಲವಲ್ಲ. 2013ರಲ್ಲಿ ಇದೇ ರೀತಿ ಸದನದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಸಚಿವ ಅರುಣ್ ಜೇಟ್ಲಿ ನಡುವಿನ ವಾಗ್ವಾದದ ಅಸಮಂಜಸ ಮಾತುಗಳನ್ನು ಕಡತಗಳಿಂದ ತೆಗೆದುಹಾಕಲಾಗಿತ್ತು.

ಪ್ರಧಾನಿಯವರು ತಮ್ಮ ಸ್ಥಾನಕ್ಕೆ ತಕ್ಕವಾದ ಮಾತುಗಳನ್ನಾಡಬೇಕು. ಅವರ ಮಾತುಗಳಿಂದ ಸಣ್ಣವರಾಗಿದ್ದಾರೆ, ಇದು ದೇಶಕ್ಕೆ ಅವರು ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.