ದೇಶ

ಹೈದ್ರಾಬಾದ್ : ಒಸ್ಮಾನಿಯಾ ವಿವಿಗೆ ರಾಹುಲ್ ಭೇಟಿಗೆ ಅನುಮತಿ ನಿರಾಕರಣೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಸ್ಮಾನಿಯಾ ವಿಶ್ವವಿದ್ಯಾಲಯ ಭೇಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆಗಳು ಕೇಳಿದ ಮನವಿಯನ್ನು ಭದ್ರತೆಯ ಕಾರಣದಿಂದಾಗಿ ತಿರಸ್ಕರಿಸಲಾಗಿದೆ.

ಹೈದ್ರಾಬಾದ್ : ಒಸ್ಮಾನಿಯಾ ವಿವಿಗೆ ರಾಹುಲ್ ಭೇಟಿಗೆ  ಅನುಮತಿ ನಿರಾಕರಣೆ
ರಾಹುಲ್ ಗಾಂಧಿ
Published On :

ಹೈದ್ರಾಬಾದ್ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಸ್ಮಾನಿಯಾ ವಿಶ್ವವಿದ್ಯಾಲಯ ಭೇಟಿಗೆ ಸಂಬಂಧಿಸಿದಂತೆ  ವಿದ್ಯಾರ್ಥಿ ಸಂಘಟನೆಗಳು ಕೇಳಿದ ಮನವಿಯನ್ನು ಭದ್ರತೆಯ ಕಾರಣದಿಂದಾಗಿ ನಿರಾಕರಿಸಲಾಗಿದೆ.

ತೆಲಂಗಾಣದ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿನ ಶಿಕ್ಷಣ ಮತ್ತು ಉದ್ಯೋಗ ಕುರಿತಂತೆ ಮಾತನಾಡುವ ಪ್ರಸ್ತಾವವಿತ್ತು. ಆದಾಗ್ಯೂ, ಕಾಂಗ್ರೆಸ್ ಅಧ್ಯಕ್ಷರಿಗೆ ವಿಶೇಷ  ಭದ್ರತಾ ವ್ಯವಸ್ಥೆ  ಒದಗಿಸಬೇಕಾಗಿರುವುದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ.

ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಸಂಶಯಾಸ್ಪದ ಅಭಿವೃದ್ದಿ ಮಾದರಿ  ಬಹಿರಂಗಗೊಳ್ಳುವ ಭಯದಲ್ಲಿ ಹಾಗೂ ಭದ್ರತೆಯ ನೆಪದಲ್ಲಿ ರಾಹುಲ್ ಗಾಂಧಿ ಒಸ್ಮಾನಿಯಾ ಭೇಟಿಗೆ ನಿರಾಕರಿಸಲಾಗಿದೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಶರವಣ ದಾಸೊಜ್  ಟೀಕಿಸಿದ್ದಾರೆ.

 ಶಿಕ್ಷಣ ಮತ್ತು ಉದ್ಯೋಗ ನೀಡುವ  ಸಂಬಂಧ ಕೆ . ಚಂದ್ರಶೇಖರ್ ನೀಡಿದ್ದ ಚುನಾವಣೆ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ.   ಕೇವಲ 25 ಸಾವಿರ ಹುದ್ದೆಗಳನ್ನು ಸರ್ಕಾರದಿಂದ ನೇಮಕ ಮಾಡಿಕೊಳ್ಳಲಾಗಿದ್ದು,  1 ಲಕ್ಷ ಉದ್ಯೋಗ ನೀಡುತ್ತೇನೆ ಎಂದು ಹೇಳಿದ ಚಂದ್ರಶೇಖರ್ ರಾವ್ ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದಾಸೊಜ್ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಆಗಸ್ಟ್ 13 ಮತ್ತು 14 ರಂದು ಎರಡು ದಿನ ಹೈದ್ರಾಬಾದ್ ಪ್ರವಾಸ ಕೈಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.