ದೇಶ

ಅಸ್ಸಾಂ ಎನ್ಆರ್'ಸಿ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳು

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್'ಸಿ) ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿರುವ ವಿರೋಧ ಪಕ್ಷಗಳ ನಾಯಕರು, ಮನವಿ ಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ...

ಅಸ್ಸಾಂ ಎನ್ಆರ್'ಸಿ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳು
ರಾಷ್ಟ್ರಪತಿ ರಾಮನಾಥ ಕೋವಿಂದ್
Published On :
ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್'ಸಿ) ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿರುವ ವಿರೋಧ ಪಕ್ಷಗಳ ನಾಯಕರು, ಮನವಿ ಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. 
ಇಂದು ಮಧ್ಯಾಹ್ನ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿರುವ ವಿರೋಧ ಪಕ್ಷಗಳ ನಾಯಕರು ಪಟ್ಟಿಯಲ್ಲಿ ಒಬ್ಬ ಭಾರತೀಯನ ಹೆಸರೂ ಕೂಡ ಬಿಟ್ಟು ಹೋಗಬಾರದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. 
ಬಾಂಗ್ಲಾದೇಶ ಪ್ರತ್ಯೇಕ ರಾಜ್ಯದವಾದ ಬಳಿಕ ಅಸ್ಸಾಂಗೆ ಬಾಂಗ್ಲಾದಿಂದ ಹಲವು ವಲಸಿಗರು ಬಂದಿದ್ದರು. 1972 ಮಾರ್ಚ್ 19ರಂದು ದ್ವಿಪಕ್ಷೀಯ ಸ್ನೇಹ ವೃದ್ಧಿಗೆ ಭಾರತ-ಬಾಂಗ್ಲಾದೇಶ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು ಆದರೆ, ವಲಸಿಗರು ಆಗಮಿಸುವುದು ಮುಂದುವರೆಯಿತು. 
ಆಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಭಾರೀ ಆಂದೋಲನ ಆರಂಭವಾಯಿತು. ಅಸ್ಸಾಂನ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಈ ಆಂದೋಲನದ ಉದ್ದೇಶವಾಗಿತ್ತು. ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿತು. 
ಕೇಂದ್ರ ಸರ್ಕಾರ ಸಂಸತ್ ನಲ್ಲಿ ಡಿಟರ್ಮಿನೇಷನ್ ಬೈ ಟ್ರಿಬ್ಯುನಲ್ ಕಾಯ್ದೆ 1983ನ್ನು ಮಂಡನೆ ಮಾಡಿತು. ಈ ಕಾಯ್ದೆ ಅಸ್ಸಾಂ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಈ ಕಾಯ್ದೆ ಮೂಲಕ ವಲಸಿಗರನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ. 
2017ರ ಡಿಸೆಂಬರ್ ನಲ್ಲಿ ಮೊದಲ ಕರಡು ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 1.9 ಕೋಟಿ ಪೌರರ ಹೆಸರು ಪ್ರಕಟಿಸಲಾಗಿತ್ತು. ಅಂತಿಮ ಕರಡು ಪಟ್ಟಿಯಲ್ಲಿ ಹೆಸರು ಸೇರಿಸಿ ಎಂದು 3.29 ಕೋಟಿ ಜನರು ಅರ್ಜಿ ಹಾಕಿದ್ದರು. ಅವರಲ್ಲಿ 2.98 ಕೋಟಿ ಜನರನ್ನು ಸೇರ್ಪಡೆಗೊಳಿಸಲಾಗಿತ್ತು. 40.07 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು. 
ಇದಾದ ಬಳಿಕ ಜುಲೈ. 30 ರಂದು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 3.29 ಕೋಟಿ ಅರ್ಜಿಯಲ್ಲಿ 2.89 ಕೋಟಿ ಜನರು ಪಟ್ಟಿಯಲ್ಲಿದ್ದಾರೆ. 40 ಲಕ್ಷ ಜನರ ಪಟ್ಟಿಯಲ್ಲಿ ಸೇರಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.