ದೇಶ

ಜನ ಮೇಜರ್ ರಾಣೆ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದರೆ, ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ, ಕಾರ್ಪೊರೇಟರ್ ಭಾಗಿ!

ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡೇಟಿಗೂ ಜಗ್ಗದೇ ಹೋರಾಡಿ ಹುತಾತ್ಮರಾಗಿದ್ದ ಮೇಜರ್ ಕೌಸ್ತುಭ್ ರಾಣೆ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸ್ಥಳೀಯರು ಕಾಯುತ್ತಿದ್ದರೆ ಬಿಜೆಪಿ ಶಾಸಕ....

ಜನ ಮೇಜರ್ ರಾಣೆ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದರೆ, ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ, ಕಾರ್ಪೊರೇಟರ್ ಭಾಗಿ!
ಮೇಜರ್ ರಾಣೆ ಪಾರ್ಥಿವ ಶರೀರದ ಮೆರವಣಿಗೆ ದೃಶ್ಯ
Published On :
ಮುಂಬೈ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡೇಟಿಗೂ ಜಗ್ಗದೇ ಹೋರಾಡಿ ಹುತಾತ್ಮರಾಗಿದ್ದ ಮೇಜರ್ ಕೌಸ್ತುಭ್ ರಾಣೆ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸ್ಥಳೀಯರು ಕಾಯುತ್ತಿದ್ದರೆ ಬಿಜೆಪಿ ಶಾಸಕ, ಕಾರ್ಪೊರೇಟರ್ ಹುಟ್ಟುಹಬ್ಬ ಸಮಾರಂಭದ ಸಂಭ್ರಮದಲ್ಲಿದ್ದರು!. 
ಮರಾಠಿ ಸುದ್ದಿವಾಹಿನಿಯೊಂದು ಬಿಜೆಪಿ ಶಾಸಕ, ಕಾರ್ಪೊರೇಟರ್ ಹುಟ್ಟುಹಬ್ಬ ಸಮಾರಂಭದ ಸಂಭ್ರಮದಲ್ಲಿ ತೊಡಗಿದ್ದನ್ನು ಪ್ರಸಾರ ಮಾಡಿದ್ದು, ಜನಪ್ರತಿನಿಧಿಗಳ ನಡೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಆ.07 ರಂದು ರಾತ್ರಿ ಪಕ್ಷದ ಕಾರ್ಪೊರೇಟರ್ ಆನಂದ್ ಮಂಜ್ರೇಕರ್  ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಸೇರಿದಂತೆ ಮಿರಾ-ಭಾಯಂದರ್ ಪುರಸಭೆಯ 12 ಬಿಜೆಪಿ ಕಾರ್ಪೊರೇಟರ್ ಗಳು ಭಾಗಿಯಾಗಿದ್ದರು.
ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಮೇಜರ್ ರಾಣೆ ಅವರ ಪಾರ್ಥಿಕ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಲು ಎಲ್ಲರೂ ಕಾದುಕುಳಿತಿದ್ದರೆ, ಬಿಜೆಪಿ ಶಾಸಕರು, ಕಾರ್ಪೊರೇಟರ್ ಗಳು ಹುತ್ಟುಹಬ್ಬ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆಯೇ ಶಾಸಕ ನರೇಂದ್ರ ಮೆಹ್ತಾ ಕ್ಷಮೆ ಯಾಚಿಸಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ನಿರೀಕ್ಷಣೆಯಲ್ಲಿರಬೇಕಾದರೆ ಹುಟ್ಟುಹಬ್ಬದ ಸಂಭ್ರಮ ನಡೆಯಬಾರದಿತ್ತು. ನಡೆದಿದ್ದು ದುರದೃಷ್ಟಕರ, ನಾವು ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.