ದೇಶ

ಕರುಣಾನಿಧಿ ಮತ್ತು ಅವರ ಪ್ರತಿಭಟನೆಯ ಹಾದಿ

ಹಿಂದಿ ಭಾಷೆ ಹೇರಿಕೆ ವಿರುದ್ಧ ದಕ್ಷಿಣ ಭಾರತದಲ್ಲಿ ಪ್ರತಿಭಟನೆ ಉತ್ತುಂಗಕ್ಕೆ ಏರಿದ 1953ರ ಸಮಯವದು...

ಕರುಣಾನಿಧಿ ಮತ್ತು ಅವರ ಪ್ರತಿಭಟನೆಯ ಹಾದಿ
ಎಂ ಕರುಣಾನಿಧಿ
Published On :

ಹಿಂದಿ ಭಾಷೆ ಹೇರಿಕೆ ವಿರುದ್ಧ ದಕ್ಷಿಣ ಭಾರತದಲ್ಲಿ ಪ್ರತಿಭಟನೆ ಉತ್ತುಂಗಕ್ಕೆ ಏರಿದ 1953ರ ಸಮಯವದು. ತಮಿಳುನಾಡಿನಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕರುಣಾನಿಧಿಯವರು ಮುಂಚೂಣಿ ಪಾತ್ರ ವಹಿಸಿದ್ದರು. 1953ರ ಜುಲೈ 15ರಂದು ಕರುಣಾನಿಧಿಯವರು ಡಿಎಂಕೆ ಸದಸ್ಯರೊಂದಿಗೆ ದಾಲ್ಮಿಯಪುರಂ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಆರಂಭಿಸಿದರು. ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದಲ್ಲದೆ ನಿಲ್ದಾಣದ ಫಲಕಗಳಲ್ಲಿ ಹಿಂದಿಯಲ್ಲಿ ಬರೆಯಲಾಗಿದ್ದ ಅಕ್ಷರವನ್ನು ಅಳಿಸಿ ಹಾಕಿದರು.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸ್ ಸಿಬ್ಬಂದಿ ಬಂದಾಗ ಪರಿಸ್ಥಿತಿ ಬಿಗಡಾಯಿಸಿತು. ಇಬ್ಬರು ಡಿಎಂಕೆ ಕಾರ್ಯಕರ್ತರು ಪೊಲೀಸರ ಲಾಠಿಚಾರ್ಜ್ ಗೆ ಮೃತಪಟ್ಟರು. ಕರುಣಾನಿಧಿಯವರ ಬಂಧನ ಕೂಡ ಆಯಿತು.

ಧರ್ಮ ವಿರೋಧಿ ತತ್ವ, ಸಿದ್ದಾಂತಗಳು: ಕರುಣಾನಿಧಿಯವರು ಧರ್ಮ ವಿರೋಧಿ ತತ್ವ, ಸಿದ್ಧಾಂತಗಳನ್ನು ಅನುಸರಿಸಿದವರು. ದೇಶಾದ್ಯಂತ ಇರುವ ಧಾರ್ಮಿಕ ಸಿದ್ಧಾಂತಗಳನ್ನು ಅಷ್ಟೇ ಕಠುವಾಗಿ ಟೀಕಿಸುತ್ತಿದ್ದರು. ಚಿತ್ರಕಥೆ ಬರೆಯುವುದರಲ್ಲಿ ಸಿದ್ಧಹಸ್ತರಾಗಿದ್ದರು. 1952ರಲ್ಲಿ ಪರಶಕ್ತಿ ಚಿತ್ರಕ್ಕೆ ಕಥೆ ಬರೆದಿದ್ದರು. ಚಿತ್ರದಲ್ಲಿ ನಟ ಶಿವಾಜಿ ಗಣೇಶನ್ ಅವರ ಕೋರ್ಟ್ ದೃಶ್ಯ ಅಂದು ಸಾಮಾಜಿಕ ಮತ್ತು ಧಾರ್ಮಿಕ ತತ್ವ, ಸಿದ್ಧಾಂತಗಳ ಮೇಲೆ ಹರಿತವಾದ ಟೀಕೆ ಮಾಡಿದ್ದು ಭಾರೀ ಸುದ್ದಿಯಾಗಿತ್ತು.

ಕರುಣಾನಿಧಿಯವರು ತಮ್ಮ ಧಾರ್ಮಿಕ ಸಿದ್ಧಾಂತಗಳಿಗೆ ವಿವಾದಕ್ಕೊಳಗಾಗಿದ್ದರು. ರಾಮಸೇತುವಿನ ಬಗ್ಗೆ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಶ್ರೀಲಂಕಾಗೆ ಸಂಪರ್ಕಿಸುವ ರಾಮಸೇತುವನ್ನು ರಾಮ ಕಟ್ಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಎಲ್ ಟಿಟಿಇ ಮತ್ತು ಎಲ್ ಟಿಟಿಇ ನಾಯಕ ವಿ ಪ್ರಭಾಕರನ್ ಎಲ್ ಟಿಟಿಇ ಕಡೆ ಅನುಕಂಪವನ್ನು ಕರುಣಾನಿಧಿ ಹೊಂದಿದ್ದರು ಎಂದು ಹೇಳಲಾಗುತ್ತಿದ್ದು ಟಿವಿ ಚಾನೆಲ್ ವೊಂದರಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. ಎಲ್ಟಿಟಿಇ ನಾಯಕ ಪ್ರಭಾಕರನ್ ತನ್ನ ಸ್ನೇಹಿತ ಎಂದು ಹೇಳಿದ್ದರು.

ಕಾವೇರಿ ನದಿ ನೀರು ಹಂಚಿಕೆ, ಜಲ್ಲಿಕಟ್ಟು ಮತ್ತು ಶ್ರೀಲಂಕಾ ವಿವಾದ: ತಮಿಳುನಾಡಿನ ಮೇರು ರಾಜಕೀಯ ನಾಯಕ ಎಂ ಕರುಣಾನಿಧಿ ಹಲವು ಸಾಮಾಜಿಕ ವಿಷಯಗಳ ಬಗ್ಗೆ ಸ್ಪಂದಿಸುತ್ತಿದ್ದರು. ತಮಿಳುನಾಡು ಮತ್ತು ಕರ್ನಾಟಕ ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ , ತಮಿಳುನಾಡಿನ ಪ್ರಾಚೀನ ಕ್ರೀಡೆ ಜಲ್ಲಿಕಟ್ಟಿಗೆ ಮತ್ತು ಶ್ರೀಲಂಕಾ ವಿಚಾರದಲ್ಲಿ ತಮ್ಮ ಬಲವಾದ ನಿಲುವು ತಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.