ದೇಶ

ಕರುಣಾನಿಧಿ ಜೀವನ ಮತ್ತು ಕುಟುಂಬ

ಕಲೈನಾರ್ ಎಂದೇ ಖ್ಯಾತಿ ಪಡೆದಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಜೀವನ...

ಕರುಣಾನಿಧಿ ಜೀವನ ಮತ್ತು ಕುಟುಂಬ
ಕರುಣಾನಿಧಿ ಕುಟುಂಬ
Published On :
ಚೆನ್ನೈ: ಕಲೈನಾರ್ ಎಂದೇ ಖ್ಯಾತಿ ಪಡೆದಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಜೀವನ ಮತ್ತು ಕುಟುಂಬ ನಿರ್ವಹಣೆ ತುಂಬಾ ಸ್ವಾರಸ್ಯಕರವಾಗಿದೆ.
ಕರುಣನಾಧಿ ಅವರು ಒಟ್ಟು ಮೂರು ಬಾರಿ ಮದುವೆಯಾಗಿದ್ದು, ದಿ.ಪದ್ಮಾವತಿ, ದಯಾಳು ಅಮ್ಮಾಳ್ ಮತ್ತು ರಜತಿ ಅಮ್ಮಾಳ್ ಅವರ ಪತ್ನಿಯರು. ಮಕ್ಕಳಾದ ಎಂ.ಕೆ. ಸ್ಟಾಲಿನ್, ಕನಿಮೊಳಿ, ಎಂ.ಕೆ ಅಳಗಿರಿ, ಎಂ.ಕೆ. ಮುತ್ತು, ಎಂ.ಕೆ. ತಮಿಳರಸು ಮತ್ತು ಎಂ.ಕೆ. ಸೆಲ್ವಿ ಅವರನ್ನು ಅಗಲಿದ್ದಾರೆ.
ಮೊದಲ ಪುತ್ರ ಎಂ.ಕೆ. ಮುತ್ತು, ಮೊದಲ ಪತ್ನಿ ದಿ.ಪದ್ಮಾವತಿ ಅವರ ಪುತ್ರ. ಪದ್ಮಾವತಿ ಸಾವಿಗೀಡಾದ ಬಳಿಕ ಅವರು ದಯಾಳು ಅಮ್ಮಾಳ್‌ ಅವರನ್ನು ಮದುವೆಯಾದರು. ಇವರಿಗೆ ಹುಟ್ಟಿದದವರೇ ಅಳಗಿರಿ ಮತ್ತು ಇಂದಿನ ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್‌. ರಷ್ಯಾದ ಕ್ರಾಂತಿಕಾರಿ ಸ್ಟಾಲಿನ್‌ ನಿಧನರಾದ ಐದು ದಿನದ ನಂತರ ಮಗ ಹುಟ್ಟಿದ್ದರಿಂದ ಆತನಿಗೆ ಸ್ಟಾಲಿನ್‌ ಎಂದು ಹೆಸರಿಡಲಾಗಿತ್ತು. ಮುಂದೆ ಇವರಿಬ್ಬರಲ್ಲಿ ಕಲಹ ಹುಟ್ಟಿಕೊಂಡಾಗ ಅಳಗಿರಯನ್ನು ಪಕ್ಷದಿಂದಲೇ ಕರುಣಾನಿಧಿ ಹೊರಹಾಕಬೇಕಾಯಿತು.
ದಯಾಳು ಅಮ್ಮಾಳ್ ಜತೆ ನಾಲ್ಕು ಮಕ್ಕಳನ್ನು ಪಡೆದ ಕರುಣಾನಿಧಿ ಮತ್ತೆ ಮೂರನೇ ಮದುವೆಯಾದರು. ಆಕೆಯೇ ರಜತಿ ಅಮ್ಮಾಳ್‌. ಈಕೆಗೆ ಹುಟ್ಟಿದ ಮಗಳು ಕನಿಮೋಳಿ. ಹೀಗೆ ಒಟ್ಟು ಆರು ಮಕ್ಕಳನ್ನು ಕರುಣಾನಿಧಿ ಪಡೆದಿದ್ದರು.
ರಾಜಕೀಯ ಜೀವನದಲ್ಲಿ ಎಷ್ಟೇ ವಿವಾದ, ಗೊಂದಲಗಳಿದ್ದರೂ ಕಲೈನಾರ್ ಅವರು ವೈಯಕ್ತಿಕ ಜೀವನವನ್ನು ಶಿಸ್ತಾಗಿ ನಿಭಾಯಿಸುತ್ತಿದ್ದರು. ಅಳಗಿರಿ ವಿಚಾರ ಬಿಟ್ಟರೆ ಮೂರು ಪತ್ನಿಯರ ಆರು ಮಕ್ಕಳ ನಡುವೆ ಬೇರಾವ ವಿವಾದವೂ ಬರದಂತೆ ನೋಡಿಕೊಂಡಿದ್ದರು.
ಜೀವನದಲ್ಲಿ ಸಮಯವನ್ನು ಕಟ್ಟಿನಿಟ್ಟಾಗಿ ಪಾಲಿಸುತ್ತಿದ್ದ ಕರುಣಾನಿಧಿ ಇಬ್ಬರು ಹೆಂಡತಿಯರನ್ನು ಬೇರೆ ಬೇರೆ ಅವಧಿಯಲ್ಲಿ ಸಂಧಿಸುತ್ತಿದ್ದರು. ಒಂದು ಸೂತ್ರಕ್ಕೆ ಕಟ್ಟು ಬಿದ್ದಂತೆ ಅವರಿಬ್ಬರನ್ನೂ ಹೊಂದಿಸಿಕೊಂಡು ಹೋಗುತ್ತಿದ್ದರು.
ಚೆನ್ನೈನ ಗೋಪಾಲಪುರಂ ಮತ್ತು ಸಿಐಟಿ ಕಾಲೋನಿ ಎಂಬ ಎರಡು ಪ್ರದೇಶಗಳಲ್ಲಿ ಅವರಿಗೆ ಮನೆ ಇತ್ತು. ಇವೆರಡರ ನಡುವಿನ ಅಂತರ ಕೇವಲ 2 ಕಿಲೋಮಿಟರ್‌. ಈ ಎರಡು ಸ್ಥಳಗಳ ಮಧ್ಯೆ ದಿನಕ್ಕೆರಡು ಬಾರಿ ಪ್ರಯಾಣಿಸುತ್ತಿದ್ದ ಕರುಣಾನಿಧಿ, ತಮ್ಮ ವಿರಾಮ ಮತ್ತು ಆಹಾರವನ್ನು ಇಬ್ಬರ ಜತೆಯೂ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ದಯಾಳು ಅಮ್ಮಾಳ್ ಜತೆ ಗೋಪಾಲಪುರಂ ನಿವಾಸದಲ್ಲಿ ಅವರು ಬೆಳಗ್ಗಿನ ಉಪಹಾರ ಮತ್ತು ಸಂಜೆಯ ಟೀ ಸೇವಿಸುತ್ತಿದ್ದರು. ರಾತ್ರಿಯನ್ನು ಕಳೆಯಲು ಸಿಐಟಿ ಕಾಲೊನಿಯಲ್ಲಿರುವ ರಾಜಾಥಿ ಅಮ್ಮಾಳ್ ಮನೆಗೆ ಹೋಗುತ್ತಿದ್ದರು. ಅಲ್ಲೇ ಅವರು ಮಧ್ಯಾಹ್ನದ ಉಟ ಮತ್ತು ರಾತ್ರಿಯ ಊಟ ಸವಿಯುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.