ದೇಶ

ವಿವಾಹೇತರ ಸಂಬಂಧ: ಮದುವೆಯಾಗುವಂತೆ ಪೀಡಿಸಿದ ಪ್ರಿಯತಮೆಯ ಬರ್ಬರ ಹತ್ಯೆ

ವಿವಾಹೇತರ ಸಂಬಂಧ ಇಟ್ಟುಕೊಂಟಿದ್ದ ವ್ಯಕ್ತಿಯೊಬ್ಬ ಮದುವೆಯಾಗುವಂತೆ ಪೀಡಿಸಿದ ಕಾರಣಕ್ಕೆ ತನ್ನ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಗೋಕಲ್ ಪುರಿಯಲ್ಲಿ ನಡೆದಿದೆ. ..

ವಿವಾಹೇತರ ಸಂಬಂಧ: ಮದುವೆಯಾಗುವಂತೆ ಪೀಡಿಸಿದ ಪ್ರಿಯತಮೆಯ ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ವಿವಾಹೇತರ ಸಂಬಂಧ ಇಟ್ಟುಕೊಂಟಿದ್ದ ವ್ಯಕ್ತಿಯೊಬ್ಬ ಮದುವೆಯಾಗುವಂತೆ ಪೀಡಿಸಿದ ಕಾರಣಕ್ಕೆ ತನ್ನ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಗೋಕಲ್ ಪುರಿಯಲ್ಲಿ ನಡೆದಿದೆ. 
ಆಗಸ್ಟ್ 1 ರಂದು ಹತ್ಯೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆ ಮಾಡಿದ ಬಳಿಕ ಮಹಿಳೆಯ ಮೃತದೇಹವನ್ನು ಮನೆಯಲ್ಲಿದ್ದ ಅಲ್ಮೆರಾದಲ್ಲಿ ಬಚ್ಚಿಟ್ಟಿದ್ದ ಆರೋಪಿ, ತನಗೇನೂ ತಿಳಿದೇ ಇಲ್ಲ ಎಂಬಂತೆ ಪೊಲೀಸರಿಗೆ ಕರೆ ಮಾಡಿ ಮನೆಯಲ್ಲಿ ದುರ್ವಾಸನೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾನೆ. 
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ ಮನೆಯಲ್ಲಿದ್ದ ಅಲ್ಮೆರಾದಲ್ಲಿ ಮೃತದೇಹ ಪತ್ತೆಯಾಗಿದೆ. ಅನುಮಾನಗೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 
ಬಂಧನಕ್ಕೊಳಗಾಗಿರುವ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಹತ್ಯೆಯಾಗಿರುವ ಮಹಿಳೆಯೊಂದಿಗೆ ಆರೋಪಿ ಅಕ್ರಮ ಸಂಬಂಧ ಹೊಂದಿದ್ದ. ಪತ್ನಿಗೆ ವಿಚ್ಛೇದನವನ್ನು ನೀಡಿ ತನ್ನನ್ನು ವಿವಾಹವಾಗುವಂತೆ ಮಹಿಳೆ ಒತ್ತಡ ಹೇರುತ್ತಿದ್ದಳು. ಇದಲ್ಲದೆ ಮಹಿಳೆ ಇತರೆ ಪುರುಷರೊಂದಿಗೆ ಗೆಳೆತನವನ್ನು ಹೊಂದಿದ್ದು, ಇದರಿಂದ ಆರೋಪಿ ಬೇಸರಗೊಂಡಿದ್ದ. ಎರಡೂ ವಿಚಾರಗಳಿಂದ ಬೇಸತ್ತ ಆರೋಪಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.