ದೇಶ

ಪೋನ್ ನಲ್ಲಿ ಏಕಾಏಕಿ ಆಧಾರ್ ಸಹಾಯವಾಣಿ ಸಂಖ್ಯೆ : ಬಳಕೆದಾರರಲ್ಲಿ ಗೊಂದಲ

ವಿಶಿಷ್ಠ ಗುರುತು ಪ್ರಾಧಿಕಾರದ ಟ್ರೋಲ್ ಪ್ರೀ ಸಹಾಯವಾಣಿ ಸಂಖ್ಯೆಯನ್ನು ಬಳಕೆದಾರ ಗಮನಕ್ಕೆ ತರದೇ ಪೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.

ಪೋನ್ ನಲ್ಲಿ  ಏಕಾಏಕಿ  ಆಧಾರ್ ಸಹಾಯವಾಣಿ ಸಂಖ್ಯೆ   : ಬಳಕೆದಾರರಲ್ಲಿ ಗೊಂದಲ
ಸಾಂದರ್ಭಿಕ ಚಿತ್ರ
Published On :

ನವದೆಹಲಿ : ವಿಶಿಷ್ಠ ಗುರುತು ಪ್ರಾಧಿಕಾರದ  ಟ್ರೋಲ್ ಪ್ರೀ ಸಹಾಯವಾಣಿ ಸಂಖ್ಯೆಯನ್ನು  ಬಳಕೆದಾರ ಗಮನಕ್ಕೆ ತರದೇ  ಪೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು  ಸ್ಮಾರ್ಟ್ ಪೋನ್  ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.

ಆದಾಗ್ಯೂ, ಈ ವಿಚಾರದ ಬಗ್ಗೆ ಯುಐಡಿಎಐ ಯಾವುದೇ  ಅಧಿಕೃತ ಹೇಳಿಕೆ  ನೀಡಿಲ್ಲ.  ಈ ಹಿಂದೆ ಇದ್ದ 1800-300 ಸಹಾಯವಾಣಿ ಸಂಖ್ಯೆ ಜೊತೆಗೆ  1947  ಹೊಸ  ನಂಬರ್  ಪೋನ್ ಬುಕ್ಸ್ ನಲ್ಲಿ ಕಾಣಿಸಿಕೊಂಡಿದೆ.

ಇದು ಜೋಕ್ಸ್ ಅಲ್ಲ. ನನ್ನ ಪೋನ್ ನಲ್ಲೂ ಕೂಡಾ ಇದು ಇದೆ. ಈ ನಂಬರ್ ನ್ನು ನಾನು ಸೇವ್ ಮಾಡಿಕೊಂಡಿಲ್ಲ. ನಿಮ್ಮ ಪೋನ್ ಆಪ್  ಚೆಕ್ ಮಾಡಿಕೊಳ್ಳಿ ಎಂಬ  ಸಂದೇಶಗಳನ್ನು ಸ್ಕ್ರೀನ್ ಹಾಟ್ ನಲ್ಲಿ  ಟ್ವಿಟ್  ಬಳಕೆದಾರರು ಹಾಕುತ್ತಿದ್ದಾರೆ.

ಆಧಾರ್ ಕಾರ್ಡ್ ಇರುವ, ಇಲ್ಲದಿರುವ ಅಥವಾ  ಆಧಾರ್ ಆಪ್ ಜೋಡಣೆ ಮಾಡಿರುವ, ಮಾಡದಿರುವ ಎಲ್ಲಾ ಪೋನ್ ಗಳಲ್ಲಿ  ಸಹಾಯವಾಣಿ ನಂಬರ್ ಬರುತ್ತಿದೆ. ಬಳಕೆದಾರರ ಗಮನಕ್ಕೆ ತರದೇ   ಸಂಪರ್ಕಿತರ ಪಟ್ಟಿಯಲ್ಲಿ ಸೇರಿಸಲಾಗಿದೆ ಏಕೆ ಎಂಬುದರ ಬಗ್ಗೆ ವಿವರಣೆ ನೀಡಿ ಎಂದು ಫ್ರೆಂಚ್ ಭದ್ರತಾ ತಜ್ಞ ಎಲ್ಲಿಯಟ್  ಅಲ್ಡರ್ ಸನ್  ಟ್ವೀಟರ್ ಮೂಲಕ ಯುಐಡಿಎಐ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.