ನೀರವ್ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.

Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಕೆ ಸಿಂಗ್ ಅವರು, ಅರ್ಥಿಕ ಅಪರಾಧಿ ನೀರವ್ ಮೋದಿಯ ಗಡೀಪಾರಿಗೆ ಕೋರಿ ಬ್ರಿಟನ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
'ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿರುವ ಅರ್ಜಿಯನ್ನು ಗೃಹ ಇಲಾಖೆಯಿಂದ ವಿದೇಶಾಂಗ ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಬ್ರಿಟನ್ ನಿಂದ ನೀರವ್ ಮೋದಿಯನ್ನು ಗಡಿಪಾರು ಮಾಡಲು ಕೋರಲಾಗಿದೆ. ಇದೇ ವಿಚಾರವಾಗಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಿಕೊಂಡಲು ಬ್ರಿಟನ್ ಸರಕಾರಕ್ಕೆ ಈ ಮನವಿಯನ್ನು ರಾಯಭಾರ ಕಚೇರಿ ಮೂಲಕ ಕಳುಹಿಸಿಕೊಡಲಾಗಿದೆ' ಎಂದು ಸಿಂಗ್ ಹೇಳಿದ್ದಾರೆ.
ಅಂತೆಯೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ.ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು, ಆತನ ಸಹೋದರ ಸಂಬಂಧಿ ಮೇಹುಲ್ ಚೋಕ್ಸಿಯೊಂದಿಗೆ ಭಾರತದ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ನೀರವ್ ನ ಪಾಸ್‌ಪೋರ್ಟ್‌ಅನ್ನು ವಿದೇಶಾಂಗ ಇಲಾಖೆ ವಜಾ ಮಾಡಿದೆ ಎಂದು ಸಿಂಗ್ ಇದೇ ವೇಳೆ ತಿಳಿಸಿದ್ದಾರೆ.
ಇನ್ನು ಮಾದ್ಯಮ ವರದಿಗಳ ಅನ್ವಯ, 'ನೀರವ್ ಮೋದಿ ಬಳಿ 12ಕ್ಕೂ ಹೆಚ್ಚು ಪಾಸ್ ಪೋರ್ಟ್ ಇವೆ ಎಂದು ಹೇಳಲಾಗಿದ್ದು, ಬ್ರಿಟನ್ ನಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಈ ಹಿಂದೆಯೇ ನೀರವ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಇದೀಗ ಅಧಿಕೃತವಾಗಿ ನೀರವ್ ಮೋದಿ ಗಡಿಪಾರಿಗೆ ಅರ್ಜಿ ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiindiaಭಾರತRajyasabhaರಾಜ್ಯಸಭೆUK governmentಬ್ರಿಟನ್ ಸರ್ಕಾರPNB Fraud Caseಪಿಎನ್ ಬಿ ವಂಚನೆ ಪ್ರಕರಣNirav Modi\'s extraditionನೀರವ್ ಮೋದಿ ಗಡಿಪಾರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


