ಯುಪಿಎಸ್ ಸಿ ಫಲಿತಾಂಶ ಪ್ರಕಟ: ಹೈದರಾಬಾದ್ ಯುವಕ ಟಾಪರ್, 25 ಕನ್ನಡಿಗರು ತೇರ್ಗಡೆ
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ....

Published On :
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಹೈದಾರಾಬಾದ್ ಯುವಕ ಅನುದೀಪ್ ದುರಿಶೆಟ್ಟಿ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ. ಅನು ಕುಮಾರಿ ಎರಡನೇ ಹಾಗೂ ಸಚಿನ್ ಗುಪ್ತ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಈ ಬಾರಿ ಒಟ್ಟು 990 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ 25 ಅಭ್ಯರ್ಥಿಗಳು ವಿವಿಧ ಹಂತದ ಯಾಂಕ್ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.
ಅನುದೀಪ್ ದುರಿಶೆಟ್ಟಿ ರಾಜಸ್ಥಾನದ ಪಿಲನಿಯ ಬಿಐಟಿಎಸ್ ನಲ್ಲಿ ಬಿಇ ಪದವಿ ಪಡೆದಿದ್ದು, ಯುಪಿಎಸ್ ಸಿ ಪರೀಕ್ಷೆಯಲ್ಲಿ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳು
ಕೀರ್ತಿ ಕಿರಣ್ ಪೂಜಾರ್ 115 ರ್ಯಾಂಕ್
ಎಂ.ಶ್ವೇತಾ 119 ರ್ಯಾಂಕ್
ಟಿ.ಶುಭಮಂಗಳಾ 147 ರ್ಯಾಂಕ್
ಸಿ. ವಿಂಧ್ಯಾ 160 ರ್ಯಾಂಕ್
ಕೃತಿಕಾ 194 ರ್ಯಾಂಕ್
ಪೃಥ್ವಿಕ್ ಶಂಕರ್ 211 ರ್ಯಾಂಕ್
ಬಿ.ಗೋಪಾಲಕೃಷ್ಣ 265 ರ್ಯಾಂಕ್
ಎಚ್.ವಿನೋದ್ ಪಾಟೀಲ್ 294 ರ್ಯಾಂಕ್
ಎಂ.ಪುನೀತ್ ಕುಟ್ಟಯ್ಯ 324 ರ್ಯಾಂಕ್
ಸಿದ್ದಲಿಂಗ ರೆಡ್ಡಿ 346 ರ್ಯಾಂಕ್
ಸುದರ್ಶನ ಭಟ್ 434 ರ್ಯಾಂಕ್
ಎನ್.ವೈ. ವೃಶಾಂಕ್ 478 ರ್ಯಾಂಕ್
ಅಭಿಲಾಷ್ ಶಶಿಕಾಂತ್ ಬದ್ದೂರ್ 531 ರ್ಯಾಂಕ್
ನಿಖಿಲ್ ನಿಪ್ಪಾಣಿಕರ್ 563 ರ್ಯಾಂಕ್
ಟಿ.ಎನ್. ನಿಥನ್‌ರಾಜ್ 575 ರ್ಯಾಂಕ್
ಎಸ್. ಪ್ರೀತಮ್ 654 ರ್ಯಾಂಕ್
ಬಿ.ಸಿ. ಹರೀಶ 657 ರ್ಯಾಂಕ್
ಆರ್.ವಿಜಯೇಂದ್ರ 666 ರ್ಯಾಂಕ್
ಶಿವರಾಜ್ ಸಾಯಿಬಣ್ಣ ಮನಗಿರಿ 784 ರ್ಯಾಂಕ್
ಸ್ಪರ್ಶ ನೀಲಾಂಗಿ 805 ರ್ಯಾಂಕ್
ಆರ್.ಸಿ. ಹರ್ಷವರ್ಧನ 913 ರ್ಯಾಂಕ್
ವೆಂಕಟೇಶ ನಾಯಕ್ 930 ರ್ಯಾಂಕ್
ಪಿ.ಪವನ್ 933 ರ್ಯಾಂಕ್
ಮಹೇಶ ವದ್ದೆ 958 ರ್ಯಾಂಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


