ಮಾಹಿತಿ ಸೋರಿಕೆ: ಫೇಸ್ ಬುಕ್, ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸರ್ಕಾರದಿಂದ ಎರಡನೇ ನೋಟೀಸ್
ಮಾಹಿತಿ ಸೋರಿಕೆ ಸಂಬಂಧ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ಕೇಂದ್ರ ಸರ್ಕಾರ ಎರಡನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.
Published On :
ನವದೆಹಲಿ: ಮಾಹಿತಿ ಸೋರಿಕೆ ಸಂಬಂಧ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ಕೇಂದ್ರ ಸರ್ಕಾರ ಎರಡನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.
ಮಾಹಿತಿ ಕಳವು ಆರೋಪದ ಬಗ್ಗೆ ಗಂಭೀರ ತನಿಖೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಬ್ರಿಟೀಶ್ ಸಮೀಕ್ಷಾ ಸಂಸ್ಥೆ ಹಾಗೂ ಫೇಸ್ ಬುಕ್ ಗೆ ಎರಡನೇ ಬಾರಿಗೆ ನೋಟೀಸ್ ನೀಡಿದೆ ಎಂದು ಮೂಲಗಳು ಹೇಳಿದೆ.
ಫೇಸ್ ಬುಕ್ ತಾನು ರಚಿಸಬೇಕೆಂದಿರುವ ಭದ್ರತಾ ವಿನ್ಯಾಸ (ಸೆಕ್ಯುರಿಟಿ ಆರ್ಕಿಟೆಕ್ಚರ್) ಪಟ್ಟಿಯನ್ನು ನೀಡುವಂತೆ ಕೇಂದ್ರ ಸರ್ಕಾರ್ ಕೇಳಿದೆ "ಇದರಿಂಡ ಭಾರತೀಯರಿಗೆ ಸಂಬಂಧಿಸಿ ಚುನಾವಣೆ ಸಮಯ ಪ್ರಭಾವಿಸುವಂತಹಾ ಯಾವ ಮಾಹಿತಿ ಹಸ್ತಾಂತರವಾಗಿದೆ ಎನ್ನುವುದನ್ನು ನಾವು ತಿಳಿಯಲಿದ್ದೇವೆ"
ಯಾವುದೇ ಅನಧಿಕೃತ ಮಾಹಿತಿ ಅಥವಾ ಕಡತಗಳ ಕುರಿತಂತೆ ಫೇಸ್ ಬುಕ್ ಮೇ 10ರೊಳಗೆ ಉತ್ತರ ನೀಡಬೇಕೆಂದು ಸರ್ಕಾರ ಸೂಚನೆ ನಿಡಿದೆ.
ಫೇಸ್ ಬುಕ್ ಬಳಸುವ ಭಾರತೀಯ ಬಳಕೆದಾರರಲ್ಲಿ ಸುಮಾರು 5.62 ಲಕ್ಷ ಜನರ ಮಾಹಿತಿ ಅಕ್ರಮ ಹಸ್ತಾಂತರವಾಗಿದೆ ಎಂದು ಫೇಸ್ ಬುಕ್ ನೀಡಿದ್ದ ಹೇಳಿಕೆ ಬಳಿಕ ಕೇಂದ್ರ ಸರ್ಕಾರ ಅಂತಹಾ ಭಾರತೀಯರ ಮಾಹಿತಿ ನೀಡುವಂತೆ ಕೋರಿ ಫೇಸ್ ಬುಕ್ ಗೆ ನೋಟೀಸ್ ಜಾರಿ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳು ಈ ತಿಂಗಳ ಪ್ರಾರಂಭದಲ್ಲಿ ಸರ್ಕಾರಕ್ಕೆ ವಿವರಗಳನ್ನು ಸಲ್ಲಿಸಿದ್ದವು.. ಇದೀಗ ಇನ್ನೂ ಹೆಚ್ಚು ವಿವರಗಲನ್ನು ಕೋರಿ ಸರ್ಕಾರ ಈ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Facebookಫೇಸ್ ಬುಕ್indiaಬಾರತCambridge Analyticaಕೇಂಬ್ರಿಜ್ ಅನಾಲಿಟಿಕFacebook data scandalಫೇಸ್ ಬುಕ್ ಡೇಟಾ ಹಗರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

