ದೇಶ

ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲ, ಸಂಸತ್ ಕೂಡಾ ಕಾಸ್ಟಿಂಗ್ ಕೌಚ್ ಗೆ ಹೊರತಾಗಿಲ್ಲ: ರೇಣುಕಾ ಚೌಧರಿ

ಸಿನಿಮಾ ಕ್ಷೇತ್ರವಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ, ಸಂಸತ್ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.

ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲ, ಸಂಸತ್ ಕೂಡಾ ಕಾಸ್ಟಿಂಗ್ ಕೌಚ್ ಗೆ ಹೊರತಾಗಿಲ್ಲ: ರೇಣುಕಾ ಚೌಧರಿ
ರೇಣುಕಾ ಚೌಧರಿ
Published On :
ನವದೆಹಲಿ: ಸಿನಿಮಾ ಕ್ಷೇತ್ರವಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ, ಸಂಸತ್ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.
ಕೇವಲ ಸಿನಿಮಾ ಕ್ಷೇತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದ್ದೇ ಇದೆ. ಸಂಸತ್ ಇದಕ್ಕೆ ಹೊರತಾಗಿದೆ ಎಂದುಕೊಳ್ಳಬೇಡಿ, ಕಾಸ್ಟಿಂಗ್ ಕೌಚ್ ನ್ನು #MeToo ಘೋಷಣೆ ಮೂಲಕ ಸಮಸ್ತ ಭಾರತವೇ ವಿರೋಧಿಸಬೇಕಿರುವ ಸಮಯ ಬಂದಿದೆ ಎಂದು ರೇಣುಕಾ ಚೌಧರಿ ಕರೆ ನೀಡಿದ್ದಾರೆ.
ಕಾಸ್ಟಿಂಗ್ ಕೌಚ್ ಸಂಸ್ಕೃತಿಯ  ಬಗ್ಗೆ  ಬಾಲಿವುಡ್ ನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ರೇಣುಕಾ ಚೌಧರಿ ಈ ಮಾತನ್ನು ಹೇಳಿದ್ದಾರೆ.  ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಸರೋಜ್ ಖಾನ್, ಸರ್ಕಾರಿ ಕಚೇರಿಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ, ಆದರೆ ಕೇವಲ ಬಾಲಿವುಡ್ ನ್ನು ಮಾತ್ರ ದೂಷಿಸಲಾಗುತ್ತಿದೆ ಎಂದು ಸರೋಜ್ ಖಾನ್ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.