ದೇಶ

ಉತ್ತರ ಪ್ರದೇಶ: ಮದುವೆ ಮನೆಯಿಂದ 8 ವರ್ಷದ ಬಾಲಕಿ ಹೊತ್ತೊಯ್ದ ಕಾಮುಕ; ಅತ್ಯಾಚಾರ ಎಸಗಿ ಕೊಲೆ

ಕಾಶ್ಮೀರದ ಕತುವಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಅಂತಹದ್ದೇ ಮತ್ತೊಂದು ಪ್ರಕರಣವೊಂದು ಉತ್ತರಪ್ರದೇಶ ಲಖನೌನಲ್ಲಿ ನಡೆದಿದೆ...

ಉತ್ತರ ಪ್ರದೇಶ: ಮದುವೆ ಮನೆಯಿಂದ 8 ವರ್ಷದ ಬಾಲಕಿ ಹೊತ್ತೊಯ್ದ ಕಾಮುಕ; ಅತ್ಯಾಚಾರ ಎಸಗಿ ಕೊಲೆ
ಮದುವೆ ಮನೆಯಿಂದ ಬಾಲಕಿ ಹೊತ್ತೊಯ್ದ ಕಾಮುಕ; ಅತ್ಯಾಚಾರ ಎಸಗಿ ಕೊಲೆ!
Published On :
ಲಖನೌ: ಕಾಶ್ಮೀರದ ಕತುವಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಅಂತಹದ್ದೇ ಮತ್ತೊಂದು ಪ್ರಕರಣವೊಂದು ಉತ್ತರಪ್ರದೇಶ ಲಖನೌನಲ್ಲಿ ನಡೆದಿದೆ. 
ಪೋಷಕರೊಂದಿಗೆ ಮದುವೆಗೆ ತೆರಳಿದ್ದ ಬಾಲಕಿಯನ್ನು ಕಾಮುಕನೋರ್ವ ಹೊತ್ತೊಯ್ದಿದ್ದು, ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾನೆ. 
ಮದುವೆಯೊಂದರಲ್ಲಿ ಬಾಲಕಿ ಹಾಗೂ ಆಕೆ ಕುಟುಂಬಸ್ಥರು ಪಾಲ್ಗೊಂಡಿದ್ದರು. ಬಾಲಕಿಯ ಪೋಷಕರು ಸಮಾರಂಭದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಬಾಲಕಿಯನ್ನು ಕಟ್ಟಡವೊಂದಕ್ಕೆ ಹೊತ್ತೊಯ್ದ ಕಾಮುಕ ಆಕೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆ. 
ಹಲವು ಗಂಟೆಗಳಾದರೂ ಬಾಲಕಿ ಕಾಣದೇ ಹೋದ್ದರಿಂದ ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.