ಉತ್ತರಪ್ರದೇಶ: ಅಂಬೇಡ್ಕರ್ ಪುತ್ಥಳಿಗೂ ಕೇಸರಿ ಬಣ್ಣ!
ಹಜ್ ಭವನ, ಬಸ್ ಹಾಗೂ ಶಾಲಾ ಪಠ್ಯಪುಸ್ತಕಗಳಿಗೆ ಕೇಸರಿ ಬಣ್ಣವನ್ನು ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಅಂಬೇಡ್ಕರ್ ಅವರ ಪುತ್ಥಳಿಗೂ ಕೇಸರಿ ಬಣ್ಣವನ್ನು ಬಳಿದಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ...

Published On :
ಲಖನೌ: ಹಜ್ ಭವನ, ಬಸ್ ಹಾಗೂ ಶಾಲಾ ಪಠ್ಯಪುಸ್ತಕಗಳಿಗೆ ಕೇಸರಿ ಬಣ್ಣವನ್ನು ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಅಂಬೇಡ್ಕರ್ ಅವರ ಪುತ್ಥಳಿಗೂ ಕೇಸರಿ ಬಣ್ಣವನ್ನು ಬಳಿದಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ಬದೌನ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಪುಂಡಾಟಿಕೆಗೆ ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಂಡಿತ್ತು. ಬಳಿಕ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಂಡಳಿ ಪ್ರತಿಮೆಯನ್ನು ಮರು ನಿರ್ಮಾಣ ಮಾಡಿ, ಭಾನುವಾರವಷ್ಟೇ ಅನಾವರಣಗೊಳಿಸಿತ್ತು.
ಸಾಮಾನ್ಯವಾಗಿ ಪ್ರತಿಮೆ ಹಾಗೂ ಭಾವಚಿತ್ರ ಅಂಬೇಡ್ಕರ್ ಅವರ ಕೋಟು ಕಪ್ಪು ಅಥವಾ ನೀಲಿ ಬಣ್ಣದಲ್ಲಿರುತ್ತದೆ. ಆದರೆ, ಅಂಬೇಡ್ಕರ್ ಅವರ ಈ ಪ್ರತಿಮೆ ಕೇಸರಿ ಬಣ್ಣದಲ್ಲಿದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


