ಇಂದ್ರಾಣಿ ಮುಖರ್ಜಿಯಿಂದ ಮಿತಿಮೀರಿದ ಔಷಧಿ ಸೇವನೆ: ಮುಂಬಯಿ ಅಸ್ಪತ್ರೆ
ಜೈಲಿನಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅಧಿಕ ಪ್ರಮಾಣದಲ್ಲಿ ಔಷಧಿ ...

Published On :
ಮುಂಬಯಿ: ಜೈಲಿನಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅಧಿಕ ಪ್ರಮಾಣದಲ್ಲಿ ಔಷಧಿ ಸೇವಿಸಿದ್ದಾರೆಂದು ಮುಂಬಯಿ ಆಸ್ಪತ್ರೆ ದೃಢ ಪಡಿಸಿದೆ.
ಬೈಕುಲಾ ಜೈಲಿನಿಂದ ಶುಕ್ರವಾರ ರಾತ್ರಿ 11.45ರ ವೇಳೆಗೆ ಜೆಜೆ ಆಸ್ಪತ್ರೆಗೆ ಕರೆತರಲಾಯಿತು, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ತೀವ್ರ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇಂದ್ರಾಣಿ ಬೇಸಿಕ್ ಲೆವೆಲ್ ಪ್ರಾವಿಶನಲ್ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದ್ದಾರೆಂದು ಜೆಜೆ ಆಸ್ಪತ್ರೆ ಮುಖ್ಯಸ್ಥ ಡಾ. ಸುಧೀರ್ ನಾನಂದ್ ಕರ್ ತಿಳಿಸಿದ್ದಾರೆ, ರಕ್ತದ ಮಾದರಿ ಹಾಗೂ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದುವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಯಾವ ಔಷಧಿ ಸೇವಿಸಿದ್ದಾರೆಂಬುದು ತಿಳಿದು ಬಂದಿಲ್ಲ, ಅವರ ಕೈಯ್ಯಲ್ಲಾಗಲಿ ಅಥವಾ ಅವರಿದ್ದ ಸ್ಥಳದಲ್ಲಿ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶೀನಾ ಅವರನ್ನು 2012ರ ಏಪ್ರಿಲ್ 24ರಂದು ಕೊಲೆ ಮಾಡಿ, ಸಮೀಪದ ರಾಯಗಡ ಅರಣ್ಯದಲ್ಲಿ ದೇಹವನ್ನು ಮಾರನೆಯ ದಿನ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು. ಶೀನಾ ಅವರ ಸಹೋದರ ಮಿಖಾಯಿಲ್ ಬೋರಾ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಇಂದ್ರಾಣಿ ಮತ್ತು ಸಂಜೀವ್ ಖನ್ನಾ ವಿರುದ್ಧ ಹೊರಿಸಲಾಗಿತ್ತು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಂದ್ರಾಣಿ ಮುಖರ್ಜಿSheena BoraIndrani Mukerjeaಶೀನಾ ಬೋರಾ ಹತ್ಯೆ ಪ್ರಕರಣJJ Hospitalಜೆಜೆ ಆಸ್ಪತ್ರೆoverdoseಅಧಿಕ ಔಷಧ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


