ದೇಶ

ಭೂಗತ ಪಾತಕಿ ಅಬುಸಲೀಂ ಮೇಲಿನ ಸುಲಿಗೆ ಪ್ರಕರಣದ ತೀರ್ಪು ಮುಂದೂಡಿಕೆ

1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ ಭೂಗತ ಪಾತಕಿ ಅಬು ಸಲೀಂ ಮೇಲಿನ 2002ರ ಸುಲಿಗೆ ಪ್ರಕರಣದ ವಿಚಾರಣೆಯನ್ನು ಪಾಟಿಯಾಲ ಹೌಸ್ ನ್ಯಾಯಾಲಯ ಮುಂದೂಡಿದೆ.

ಭೂಗತ ಪಾತಕಿ ಅಬುಸಲೀಂ ಮೇಲಿನ  ಸುಲಿಗೆ ಪ್ರಕರಣದ ತೀರ್ಪು ಮುಂದೂಡಿಕೆ
ಅಬುಸಲೀಂ
Published On :

ನವದೆಹಲಿ : 1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ ಭೂಗತ ಪಾತಕಿ ಅಬು ಸಲೀಂ ಮೇಲಿನ 2002ರ ಸುಲಿಗೆ ಪ್ರಕರಣದ ತೀರ್ಪುನ್ನು  ಪಾಟಿಯಾಲ ಹೌಸ್ ನ್ಯಾಯಾಲಯ ಮುಂದೂಡಿದೆ.

ಪಾತಕಿ ಅಬು ಸಲೀಂ ಮೇಲಿನ ಸುಲಿಗೆ ಪ್ರಕರಣ ಸಂಬಂಧದ  ನ್ಯಾಯಾಧೀಶರು ಗೈರಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಎರಡು ವಾರಗಳ ಬಳಿಕ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಅಬುಸಲೀಂ ವಿರುದ್ಧ ಪ್ರಾಸಿಕ್ಯೂಸನ್ ಬಳಿ  ಸಾಕ್ಷ್ಯಾಧಾರ ಇಲ್ಲ ಎಂದು ಇದಕ್ಕೂ ಮುಂಚೆ  ಅಬು ಸಲೀಂ ಪರ ವಕೀಲರು ವಾದಿಸಿದ್ದರು.

ಅಬುಸಲೀಂ ಪೋರ್ಚಗಲ್ ನಿಂದ ಭಾರತಕ್ಕೆ 2005ರಲ್ಲಿ ಹಿಂತಿರುಗಿದ್ದು, ಈ ಪ್ರಕರಣದಲ್ಲಿ  ಸತ್ಯವನ್ನು ಮರೆಮಾಚಲಾಗಿದೆ ಎಂದು  ಅವರು ಆರೋಪಿಸಿದ್ದರು.

2002ರಲ್ಲಿ ದೆಹಲಿಯ ಉದ್ಯಮಿ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂ ಸುಲಿಗೆ ಮಾಡಿರುವ ಪ್ರಕರಣ ಇದಾಗಿದ್ದು,ಈ ಸಂಬಂಧ ಅಬು ಸಲೀಂ ವಿಚಾರಣೆ ಎದುರಿಸುತ್ತಿದ್ದಾರೆ.

 ಈ ಮಧ್ಯೆ  ಮುಂಬೈ ಸರಣಿ ಬಾಂಬ್ ಸ್ಪೋಟ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಅಬುಸಲೀ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.