ಜನತಾ ದರ್ಬಾರ್: ದೂರು ನೀಡಲು ಹೋದ ವ್ಯಕ್ತಿಯನ್ನು ದೂರ ತಳ್ಳಿದ ಸಿಎಂ ಯೋಗಿ- ವ್ಯಕ್ತಿ ಆರೋಪ
ಉತ್ತರಪ್ರದೇಶ ಗೋರಖ್ಪುರದಲ್ಲಿ ನಡೆದ ಜನತಾ ದರ್ಬಾರ್ ವೇಳೆ ಶಾಸಕನ ವಿರುದ್ಧ ದೂರು ನೀಡಲು ಹೋದಾಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನ್ನನ್ನು ದೂರ ತಳ್ಳಿದರು ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದಾರೆ...

Published On :
ಗೋರಖ್ಪುರ: ಉತ್ತರ ಪ್ರದೇಶ ಗೋರಖ್ಪುರದಲ್ಲಿ ನಡೆದ ಜನತಾ ದರ್ಬಾರ್ ವೇಳೆ ಶಾಸಕನ ವಿರುದ್ಧ ದೂರು ನೀಡಲು ಹೋದಾಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನ್ನನ್ನು ದೂರ ತಳ್ಳಿದರು ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದಾರೆ.
ಆಯುಷ್ ಸಿಂಘಾಲ್ ಯೋಗಿ ಆದಿತ್ಯಾನಾಥ್ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ.
ಶಾಸಕ ಅಮನ್ಮಣಿ ತ್ರಿಪಾಠಿಯವರು ನನ್ನ ಭೂಮಿಯನ್ನು ಕಬಳಿಸಿದ್ದರು. ಹೀಗಾಗಿ ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ತೆಗೆದುಕೊಂಡು ಜನತಾ ದರ್ಬಾರ್ ವೇಳೆ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಹೋಗಿದ್ದೆ. ದೂರು ಪತ್ರ ನೀಡುತ್ತಿದ್ದಂತೆಯೇ ಯೋಗಿ ಆದಿತ್ಯನಾಥಅ ಅವರು ಪತ್ರಗಳನ್ನು ಎಸೆದು, ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿ ನನ್ನನ್ನು ತಳ್ಳಿದರು ಎಂದು ಹೇಳಿದ್ದಾರೆ.
ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಗೋರಖ್ಪುರ ಜಿಲ್ಲಾಧಿಕಾರಿ ಕೆ.ವಿಜಯೇಂದ್ರ ಪಾಂಡಿಯಾನ್ ಅವರು, ಯಾವುದೇ ದಾಖಲೆಗಳಿಲ್ಲದೆ ಸಿಂಗಾಲ್ ಅವರು ಬಂದಿದ್ದರು. ಹೀಗಾಗಿ ಅರ್ಜಿ ತೆಗೆದುಕೊಂಡು ಅರ್ಜಿಯಲ್ಲಿರುವ ಮಾಹಿತಿಗಳನ್ನು ಬರೆದುಕೊಂಡು ಬರುವಂತೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಕೆಲ ದೂರುದಾರರು ಯಾವುದೇ ದಾಖಲೆಗಳು ಹಾಗೂ ಪತ್ರಗಳಿಲ್ಲದೆಯೇ ಬರುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳು ಪತ್ರವನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಆಯುಷ್ ಅವರೂ ಕೂಡ ಬರಿಗೈಯಲ್ಲಿ ಬಂದಿದ್ದರು. ಹೀಗಾಗಿ ಪತ್ರಗಳನ್ನು ತರುವಂತೆ ತಿಳಿಸಿದ್ದರು. ಆಯುಷ್ ಅವರನ್ನು ಜಂಟಿ ಭೂಮಿ ವಿಭಜನೆಯ ವಿಷಯವಾಗಿತ್ತು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರಪ್ರದೇಶಆರೋಪallegationಜನತಾ ದರ್ಬಾರ್CM Yogi AdityanathJanta Darbarಸಿಎಂ ಯೋಗಿ ಆದಿತ್ಯಾನಾಥ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


