ದೇಶ

ಕೇದಾರನಾಥದಲ್ಲಿ ವಾಯುಪಡೆ ಹೆಲಿಕ್ಯಾಪ್ಟರ್‌ ಪತನ; ಹಲವರಿಗೆ ಗಾಯ

ಭಾರತೀಯ ವಾಯುಪಡೆಗೆ ಸೇರಿದೆ ಕಾರ್ಗೋ ಹೆಲಿಕಾಪ್ಟರ್ ವೊಂದು ಕೇದರಾನಾಥದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಕಾಪ್ಟರ್ ನಲ್ಲಿದ್ದ ಸೇನಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇದಾರನಾಥದಲ್ಲಿ ವಾಯುಪಡೆ ಹೆಲಿಕ್ಯಾಪ್ಟರ್‌ ಪತನ; ಹಲವರಿಗೆ ಗಾಯ
ಅಪಘಾತಕ್ಕೀಡಾದ ಹೆಲಿಕಾಪ್ಟರ್
Published On :
ಕೇದಾರನಾಥ: ಭಾರತೀಯ ವಾಯುಪಡೆಗೆ ಸೇರಿದೆ ಕಾರ್ಗೋ ಹೆಲಿಕಾಪ್ಟರ್ ವೊಂದು ಕೇದರಾನಾಥದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಕಾಪ್ಟರ್ ನಲ್ಲಿದ್ದ ಸೇನಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಆರು ಸಿಬ್ಬಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇದಾರನಾಥ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಕಾರ್ಗೋ ವಿಮಾನವಾಗಿದೆ ಎಂದು ಸೇನಾ ಮೂಲಗಳ ಸ್ಪಷ್ಟಪಡಿಸಿವೆ. ಎಂಐ 17 ಹೆಲಿಕ್ಯಾಪ್ಟರ್‌ ಸೈನಿಕರಿಗೆ ಸಲಕರಣೆಗಳನ್ನು ಸಾಗಿಸುತ್ತಿತ್ತು, ಲ್ಯಾಂಡಿಂಗ್‌ ವೇಳೆ ಕಬ್ಬಿಣದ ಗೇಟ್‌ ಗೆ ಗುದ್ದಿ ಕಾಪ್ಟರ್ ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ. 
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.