ದೇಶ

ಭಾರತದಲ್ಲಿ ಈ ವರ್ಷ ಸರಾಸರಿಗಿಂತ ಮತ್ತು ಮುನ್ಸೂಚನೆ ವರದಿಗಿಂತ ಕಡಿಮೆ ಮಳೆ

ಭಾರತದಲ್ಲಿ ವಾರ್ಷಿಕ ಮುಂಗಾರು ಮಳೆ ಸರಾಸರಿಗಿಂತ ಕಡಿಮೆಯಾಗಿದ್ದು ಹವಾಮಾನ ಮುನ್ಸೂಚನೆ ವರದಿಗಿಂತ ಈ ವರ್ಷ ....

ಭಾರತದಲ್ಲಿ ಈ ವರ್ಷ ಸರಾಸರಿಗಿಂತ ಮತ್ತು ಮುನ್ಸೂಚನೆ ವರದಿಗಿಂತ ಕಡಿಮೆ ಮಳೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಭಾರತದಲ್ಲಿ ವಾರ್ಷಿಕ ಮುಂಗಾರು ಮಳೆ ಸರಾಸರಿಗಿಂತ ಕಡಿಮೆಯಾಗಿದ್ದು ಹವಾಮಾನ ಮುನ್ಸೂಚನೆ ವರದಿಗಿಂತ ಈ ವರ್ಷ ಶೇಕಡಾ 3ರಷ್ಟು ಕಡಿಮೆಯಾಗಿದೆ. ಭಾರತದ ಕೇಂದ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಮಳೆ ಸುರಿಯುತ್ತದೆ ಎಂದು ರಾಷ್ಟ್ರೀಯ ಹವಾಮಾನ ಕಚೇರಿ ಹೇಳಿದೆ.ನಿನ್ನೆಗೆ ಭಾರತದಲ್ಲಿ ಮುಂಗಾರು ಮಳೆ ಋತು ಮುಕ್ತಾಯವಾಗಿದೆ.
ಭಾರತೀಯ ಹವಾಮಾನ ಇಲಾಖೆ ಈ ವರ್ಷ ಶೇಕಡಾ 98ರಷ್ಟು ಮುಂಗಾರು ಮಳೆ ಬೀಳಬಹುದು ಎಂದು ಹೇಳಿತ್ತು. ಮುನ್ಸೂಚನೆ ಶೇಕಡಾ 3ರಷ್ಟು ಕಡಿಮೆ ಅಂದರೆ ಸರಾಸರಿ ಶೇಕಡಾ 95ರಷ್ಟು ಮಳೆಯಾಗಿದೆ. ಭಾರತದ ವಾರ್ಷಿಕ ಮಳೆ ಶೇಕಡಾ 70ರಷ್ಟು ಆಗುತ್ತಿದ್ದು, ಕೃಷಿ ವಲಯಕ್ಕೆ ಅತ್ಯಂತ ಅಗತ್ಯವಾಗಿದೆ. ಭಾರತದ 2 ಟ್ರಿಲಿಯನ್ ಆರ್ಥಿಕತೆಯ ಶೇಕಡಾ 15ರಷ್ಟು ಕೃಷಿ ವಲಯದಿಂದ ಬರುತ್ತಿದ್ದು ದೇಶದ 1.3 ಶತಕೋಟಿಗೂ ಅಧಿಕ ಜನರಿಗೆ ಉದ್ಯೋಗ ಒದಗಿಸುತ್ತದೆ.
ಮಧ್ಯ ಪ್ರದೇಶದಂತಹ ಭಾರತದ ಕೇಂದ್ರ ಭಾಗದ ರಾಜ್ಯಗಳಲ್ಲಿ ತೈಲ ಬೀಜ ಮತ್ತು ಧಾನ್ಯಗಳು ಬೆಳೆಯುವ ಪ್ರದೇಶಗಳಲ್ಲಿ ಮಳೆ ಬೀಳುವುದು ಸರಾಸರಿಗಿಂತ ಕಡಿಮೆಯಾಗಿರುವುದರಿಂದ  ಮತ್ತು ಹರ್ಯಾಣ, ಪಂಜಾಬ್ ನಂತಹ ಉತ್ತರ ರಾಜ್ಯಗಳಲ್ಲಿ ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಸರಾಸರಿಗಿಂತ ಕಡಿಮೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.