ದೇಶ

ಮುಂಬೈ ದುರಂತ: ಬುಲೆಟ್ ರೈಲಿಗೆ ಹಣವಿದೆ, ಮೇಲ್ಸೇತುವೆ ದುರಸ್ತಿಗೆ ಹಣವಿಲ್ಲವೇ: ಕೇಂದ್ರಕ್ಕೆ ಶಿವಸೇನೆ

ಮುಂಬೈ ಎಲ್ಫಿನ್'ಸ್ಟನ್ ರೈಲ್ವೇ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ...

ಮುಂಬೈ ದುರಂತ: ಬುಲೆಟ್ ರೈಲಿಗೆ ಹಣವಿದೆ, ಮೇಲ್ಸೇತುವೆ ದುರಸ್ತಿಗೆ ಹಣವಿಲ್ಲವೇ: ಕೇಂದ್ರಕ್ಕೆ ಶಿವಸೇನೆ
ಸಂಗ್ರಹ ಚಿತ್ರ
Published On :
ಮುಂಬೈ: ಮುಂಬೈ ಎಲ್ಫಿನ್'ಸ್ಟನ್ ರೈಲ್ವೇ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ. 
ಮೇಲ್ಸೇತುವೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಕೇಂದ್ರವನ್ನು ಶಿವಸೇನೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 
ಬಡ ಪ್ರಯಾಣಿಕರು ಉಪಯೋಗಿಸುವ ಸೇತುವೆಗಾಗಿ ವಿನಿಯೋಗಿಸಲು ಕೇಂದ್ರ ಸರ್ಕಾರದ ಬಳಿ ಹಣವಿಲ್ಲ. ಆದರೆ ಬುಲೆಟ್ ರೈಲುಗಳಿಗಾಗಿ ಒಂದೇ ದಿನದಲ್ಲಿ ರೂ.30 ಸಾವಿರ ಕೋಟಿ ಕೊಡುತ್ತದೆ ಎಂದು ಹೇಳಿದೆ. 
ಕೇಂದ್ರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಮೊದಲು ಬುಲೆಟ್ ರೈಲುಗಳನ್ನು ತರುವ ಬದಲು ರೈಲ್ವೇ ನಿಲ್ದಾಣಗಳಲ್ಲಿ ಪಾದಚಾರಿಗಳ ಸುರಕ್ಷತೆ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. 
ರೈಲ್ವೆ ಸಚಿವ ಪಿಯೂಷ್ ಘೋಷಾಲ್ ಅವರು ದೇಶಕ್ಕೆ ಬುಲೆಟ್ ರೈಲುಗಳನ್ನು ತರುವುದಾಗಿ ಹೇಳಿದ್ದರು. ಜನರಿಗೆ ಇದು ಅವಶ್ಯಕವಿದೆಯೇ? ಅಲಂಕಾರಿಕ ಹಾಗೂ ದುಬಾರಿ ರೈಲುಗಳ ಮೇಲೆ ಹೂಡಿಕೆ ಮಾಡುವ ಬದಲು ಕೇಂದ್ರ ಸರ್ಕಾರ, ರೈಲ್ವೇ ನಿಲ್ದಾಣ, ಪಾದಚಾರಿ ಮೇಲ್ಸೇತುವೆ ನಿರ್ವಹಣೆ, ರೈಲ್ವೇ ಟಿಕೆಟ್ ಗಳ ಕುರಿತಂತೆ ಹೆಚ್ಚಿನ ಗಮನ ಸೇರಿದಂತೆ ಇನ್ನಿತರೆ ಪ್ರಮುಖ ವಿಚಾರಗಳ ಕುರಿತಂತೆ ಗಮನ ಹರಿಸಬೇಕು. 
ರೈಲ್ವೇ ನಿರ್ವಹಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಭೀರವಾಗಿ ಪರಿಗಣಿಸಿದ್ದಾರೆಯೇ?... ಒಂದು ವೇಳೆ ಗಂಭೀರವಾಗಿ ಪರಿಗಣಿಸಿದ್ದೇ ಆಗಿದ್ದರೆ, ಪಾದಚಾರಿ ಮೇಲ್ಸೇತುವೆಯಲ್ಲಿ ಈ ರೀತಿಯ ಕಾಲ್ತುಳಿತ ದುರಂತಗಳು ಸಂಭವಿಸುತ್ತಿರಲಿಲ್ಲ. ದುರಂತ ಸಂಭವಿಸಿದ ಬಳಿಕವೇ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಶಿವಸೇನೆ ಸಾಮ್ನಾದಲ್ಲಿ ಹೇಳಿಕೊಂಡಿದೆ. 
ನಿನ್ನೆಯಷ್ಟೇ ಮುಂಬೈನ ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆಯಲ್ಲಿ ದುರ್ಘಟನೆಯೊಂದು ಸಂಭವಿಸಿತ್ತು. ಮೇಲ್ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟಿದ್ದ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 22 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.