ಗೋವುಗಳ ರಕ್ಷಣೆಗೆ ಮುಸ್ಲಿಮರು ಕೂಡ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ: ಮೋಹನ್ ಭಾಗವತ್
ಹಸುಗಳ ರಕ್ಷಣೆ ಮಾಡುವುದು ಸಂವಿಧಾನದಲ್ಲೇ ಉಲ್ಲೇಖವಾಗಿದೆ, ಅದು ಯಾವುದೇ ಧರ್ಮದ ವಿಷಯವಲ್ಲ, ಎಷ್ಟು ಮಂದಿ ಮುಸ್ಲಿಮರು ಗೋವುಗಳ ರಕ್ಷಣೆಯಲ್ಲಿ ..

Published On :
ಮುಂಬಯಿ: ಹಸುಗಳ ರಕ್ಷಣೆ ಮಾಡುವುದು ಸಂವಿಧಾನದಲ್ಲೇ ಉಲ್ಲೇಖವಾಗಿದೆ, ಅದು ಯಾವುದೇ ಧರ್ಮದ ವಿಷಯವಲ್ಲ, ಎಷ್ಟು ಮಂದಿ ಮುಸ್ಲಿಮರು ಗೋವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿದೆ. ಹಲವು ಮುಸ್ಲಿಮರು ಗೋವುಗಳ ರಕ್ಷಣೆಗೆ ತಮ್ಮ ಪ್ರಾಣ ನೀಡಿದ್ದಾರೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬಯಿಯಲ್ಲಿ, ವಿಜಯ ದಶಮಿ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಕರು ಯಾವುದೇ ಕಾರಣಕ್ಕೂ ಕಾನೂನನ್ನು ಉಲ್ಲಂಘಿಸಬಾರದು, ಹಾಗೆಯೇ ಜನಗಳು ಧರ್ಮವನ್ನು ಪರಿಗಣಿಸದೇ ಗೋವುಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ.
ಗೋರಕ್ಷಣೆ ಮಾಡುವಾಗ ಹಲವು ಜನರನ್ನು ಗೋರಕ್ಷಕರು ಕೊಂದಿರುವುದು ಖಂಡನೀಯ ಹಾಗೆಯೇ, ಹಸು ಕಳ್ಳ ಸಾಗಣೆದಾರರಿಂದ ಹಲವರು ಸಾವನ್ನಪ್ಪಿದ್ದಾರೆ, ಧರ್ಮವನ್ನು ಮೀರಿ ನಾವು ಹಸುಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ಹಸುಗಳನ್ನು ಹಾಲು ಮತ್ತು ಅದರ ಮೂತ್ರಕ್ಕೆ ಬಳಸಲಾಗುತ್ತದೆ. ಸಣ್ಣ ರೈತರು ತಮ್ಮ ಜೀವನೋಪಾಯಕ್ಕಾಗಿ ಹಸು ಸಾಕುತ್ತಾರೆ, ಹಸುಗಳ ರಕ್ಷಣೆ ಹಾಗೂ ಹಸು ಆಧಾರಿತ ಕೃಷಿಯನ್ನು ಸಂರಕ್ಷಿಸಬೇಕೆಂದು ಸಂವಿಧಾನದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


