ದೇಶ

ಯಶ್ವಂತ್ ಸಿನ್ಹಾ ಹೇಳಿದ್ದು ತಪ್ಪೆಂದು ಬಿಜೆಪಿ ಸಾಬೀತುಪಡಿಸಲಿ: ಶಿವಸೇನೆ ಸವಾಲ್

ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಬಿಜೆಪಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದು, ದೇಶದ ಆರ್ಥಿಕತೆ ಬಗ್ಗೆ ಯಶ್ವಂತ್ ಸಿನ್ಹಾ ಮಾಡಿರುವ ಆರೋಪವನ್ನು ತಪ್ಪು ಎಂದು ಸಾಬೀತುಪಡಿಸುವಂತೆ ಬಿಜೆಪಿಗೆ ಸವಾಲು ಹಾಕಿದೆ.

ಯಶ್ವಂತ್ ಸಿನ್ಹಾ ಹೇಳಿದ್ದು ತಪ್ಪೆಂದು ಬಿಜೆಪಿ ಸಾಬೀತುಪಡಿಸಲಿ: ಶಿವಸೇನೆ ಸವಾಲ್
ಶಿವಸೇನೆ-ಬಿಜೆಪಿ
Published On :
ಮುಂಬೈ: ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಬಿಜೆಪಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದು, ದೇಶದ ಆರ್ಥಿಕತೆ ಬಗ್ಗೆ ಯಶ್ವಂತ್ ಸಿನ್ಹಾ ಮಾಡಿರುವ ಆರೋಪವನ್ನು ತಪ್ಪು ಎಂದು ಸಾಬೀತುಪಡಿಸುವಂತೆ ಬಿಜೆಪಿಗೆ ಸವಾಲು ಹಾಕಿದೆ. 
ಮುಖವಾಣಿ ಸಾಮ್ನಾದಲ್ಲಿ ಲೇಖನ ಪ್ರಕಟಿಸಿರುವ ಶಿವಸೇನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಚಿದಂಬರಂ ನಂತಹ ಹಿರಿಯ ಆರ್ಥಿಕ ತಜ್ಞರು ನೋಟು ನಿಷೇಧದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದಾಗ ಅವರನ್ನು ನಿರ್ಲಕ್ಷಿಸಲಾಯಿತು. ಶಿವಸೇನೆ ಸೇರಿದಂತೆ ಹಲವು ಮಿತ್ರಪಕ್ಷಗಳು ನೋಟು ನಿಷೇಧವನ್ನು ಪ್ರಶ್ನಿಸಿದಾಗ ಅವರನ್ನು ದೇಶವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಯಿತು ಎಂದು ಶಿವಸೇನೆ ಆರೋಪಿಸಿದೆ.
ಬಿಜೆಪಿಯ ತಪ್ಪು ನಿರ್ಧಾರ, ಅಭಿಪ್ರಾಯಗಳನ್ನು ಈಗ ಅವರ ಪಕ್ಷದ ಹಿರಿಯರೇ ಆಗಿರುವ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಬಯಲು ಮಾಡಿದ್ದಾರೆ. ಈಗ ಬಿಜೆಪಿ ಯಶ್ವಂತ್ ಸಿನ್ಹಾ ಅವರ ಹೇಳಿಕೆಗಳನ್ನೂ ತಪ್ಪು ಎಂದು ಸಾಬೀತುಪಡಿಸಲಿ ಎಂದು ಶಿವಸೇನೆ ಸವಾಲು ಹಾಕಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.