ನಮ್ಮ ವಿಮಾನದಿಂದ ರೆಕ್ಕೆಗಳು ಬಿದ್ದುಹೋಗಿವೆ: ಯಶವಂತ್ ಸಿನ್ಹಾ ಲೇಖನ ಉಲ್ಲೇಖಿಸಿ ರಾಹುಲ್ ವ್ಯಂಗ್ಯ
ಸರ್ಕಾರದ ಆರ್ಥಿಕತೆಯ ನಿರ್ವಹಣೆಯ ಕುರಿತು ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಮಾಡಿರುವ ....

Published On :
ನವದೆಹಲಿ: ಸರ್ಕಾರದ ಆರ್ಥಿಕತೆಯ ನಿರ್ವಹಣೆಯ ಕುರಿತು ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಮಾಡಿರುವ ಟೀಕೆ, ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಉತ್ತಮ ಅಸ್ತ್ರವನ್ನೇ ನೀಡಿದೆ.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿ ಬರೆದಿದ್ದಾರೆ. ಪುರುಷರೇ ಮತ್ತು ಮಹಿಳೆಯರೇ ಇದು ನಿಮ್ಮ ಸಹ ಪೈಲಟ್ ಮತ್ತು ಅರ್ಥ ಸಚಿವರು ಮಾತನಾಡುತ್ತಿರುವುದು. ನಿಮ್ಮ ಸೀಟು ಬೆಲ್ಟ್ ಗಳನ್ನು ಭದ್ರ ಮಾಡಿಕೊಳ್ಳಿ ಮತ್ತು ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಿ. ನಮ್ಮ ವಿಮಾನದಿಂದ ರೆಕ್ಕೆಗಳು ಬಿದ್ದು ಹೋಗಿವೆ ಎಂದು ಟ್ವೀಟ್ ಮಾಡಿ ಯಶವಂತ್ ಸಿನ್ಹಾರ ಹೇಳಿಕೆಯನ್ನು ಶೇರ್ ಮಾಡಿದ್ದಾರೆ.
ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ, ಭಾರತದ ಆರ್ಥಿಕತೆಯಲ್ಲಿ ಈಗ ಎದುರಾಗಿರುವ ಅವ್ಯವಸ್ಥೆಗೆ ಜೇಟ್ಲಿ ಕಾರಣವಾಗಿದ್ದು, ಭಾರತದ ಆರ್ಥಿಕತೆ ಅಪಾಯದ ಅಂಚಿಗೆ ಸಿಲುಕುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಹಿಂಜರಿಕೆಯಾಗಿದೆ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಕೂಡ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಯಾರ ಮಾತು ಕೇಳದೆ, ಯಾರ ಸಲಹೆಯನ್ನೂ ಪಡೆಯದೆ ಕೇಂದ್ರ ಸರ್ಕಾರ ನೋಟುಗಳ ಅಮಾನ್ಯತೆ ಮತ್ತು ಜಿಎಸ್ ಟಿಯಂತಹ ನಿರ್ಧಾರಗಳನ್ನು ತಂದಿದೆ. ಇದರಿಂದ ದೇಶದ ಬೆನ್ನೆಲುಬಾದ ರೈತರ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ದೇಶದ ಅರ್ಥಿಕ ಬೆಳವಣಿಗೆ ಕುಸಿತ, ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಕುಸಿತ ಮತ್ತು ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆಯಿಂದ ಅನಿಯಂತ್ರಿತ ಆರ್ಥಿಕ ವಿಪತ್ತು ತಲೆದೋರಿದೆ ಎಂದು ಹೇಳಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಅವರು ಹಣಕಾಸು ಸಚಿವರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Central Governmentಕೇಂದ್ರ ಸರ್ಕಾರRahul Gandhiರಾಹುಲ್ ಗಾಂಧಿEconomyಟೀಕೆcriticismಆರ್ಥಿಕತೆYashwant Sinhaಯಶವಂತ್ ಸಿನ್ಹಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


