ಜಮ್ಮು-ಕಾಶ್ಮೀರದಲ್ಲಿ ಸೇನೆ ಮಹತ್ವದ ಕಾರ್ಯಾಚರಣೆ: ಮೋಸ್ಟ್ ವಾಂಟೆಡ್ ಉಗ್ರ ನಜರ್ ಹತ್ಯೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನೇತೃತ್ವವಹಿಸುವ ಉದ್ದೇಶದಿಂದ ಉರಿ ಸೆಕ್ಟರ್'ನಲ್ಲಿ ಗಡಿ ನುಸುಳಲು ಯತ್ನ ನಡೆಸಿದ್ದ ಉಗ್ರವಾಗಿ ಅಬ್ದುಲ್ ಖಯೂಮ್ ನಜರ್ ನನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ...

Published On :
ಶ್ರೀನಗರ; ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನೇತೃತ್ವವಹಿಸುವ ಉದ್ದೇಶದಿಂದ ಉರಿ ಸೆಕ್ಟರ್'ನಲ್ಲಿ ಗಡಿ ನುಸುಳಲು ಯತ್ನ ನಡೆಸಿದ್ದ ಉಗ್ರವಾಗಿ ಅಬ್ದುಲ್ ಖಯೂಮ್ ನಜರ್ ನನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ.
ಸುಮಾರು 50ಕ್ಕೂ ಅಧಿಕ ಮಂದಿಯ ಹತ್ಯೆಗೆ ಸಂಬಂಧಿಸಿದಂತೆ 17 ವರ್ಷಗಳಿಂದಲೂ ನಜರ್ ಸೇನಾ ಪಡೆಗಳಿಗೆ ಬೇಕಾಗುದ್ದುದ್ದರಿಂದ, ಆತನ ಹತ್ಯೆ ಸೇನೆಗೆ ಮಹತ್ವದ ಯಶಸ್ಸು ಸಾಧಿಸಿದಂತಾಗಿದೆ.
ಲಾಚಿಪೋರಾ ಪ್ರದೇಶದಲ್ಲಿ ಒಳ ಸುನುಳುವಿಕೆ ಯತ್ನವನ್ನು ವಿಫಲಗೊಳಿಸುವ ಪ್ರಯತ್ನದಲ್ಲಿ ಭದ್ರತಾ ಸಿಬ್ಬಂದಿ, ನುಸುಳುಕೋರ ನಜರ್ ನನ್ನು ಹತ್ಯೆ ಮಾಡಿದ್ದಾರೆ.
ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್ ಗಳನ್ನು ಹತ್ಯೆ ಮಾಡಿದ್ದುದ್ದರಿಂದ, ಆ ಸ್ಥಾನವನ್ನು ವಹಿಸಿಕೊಳ್ಳಲು ನಜರ್ ಕಾಶ್ಮೀರಕ್ಕೆ ಹಿಂದಿರುಗುತ್ತಿದ್ದ ಎನ್ನಲಾಗಿದೆ.
2015ರಲ್ಲಿ ನಜರ್ ಹಿಜ್ಬುಲ್ ಕಮಾಂಡರ್ ಆಗಿದ್ದ. ಈ ವೇಳೆ ಹಲವು ನಾಗರೀಕರ ಕೊಲೆ ನಡೆಸಿದ್ದ ಕಾರಣಕ್ಕೆ ಈತನ ವಿರುದ್ಧ ಆಕ್ರೋಶಗಳು ಕೇಳಿಬಂದಿದ್ದವು. ಹೀಗಾಗಿ ಈತನನ್ನು ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ ಉಚ್ಚಾಟನೆಗೊಳಿಸಿದ್ದರ. ಬಳಿಕ ನಜರ್ ತನ್ನದೇ ಆದ ಲಷ್ಕರ್ ಇ ಇಸ್ಲಾಂನ್ನು ಸ್ಥಾಪನೆ ಮಾಡಿದ್ದ. ನಜರ್ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ. ಈತನ ತಲೆಗೆ ಭದ್ರತಾ ಪಡೆಗಳು ರೂ.10 ಲಕ್ಷ ಬಹುಮಾನ ಘೋಷಣೆ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


