ದೇಶ

ತರುಣ್ ತೇಜ್ ಪಾಲ್ ಅತ್ಯಾಚಾರ ಪ್ರಕರಣ: ಆರೋಪ ಪಟ್ಟಿ ದಾಖಲಿಸಲು ಕೋರ್ಟ್ ಅನುಮತಿ, ಆದರೆ ವಿಚಾರಣೆಗೆ ತಡೆ!

ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ದಾಖಲಿಸಲು ಅನುಮತಿ ನೀಡಿದ್ದ ಮಾಪುಸಾ ಸೆಷನ್ಸ್ ಕೋರ್ಟ್ ನ ಆದೇಶವನ್ನು ಗೋವಾ...

ತರುಣ್ ತೇಜ್ ಪಾಲ್ ಅತ್ಯಾಚಾರ ಪ್ರಕರಣ: ಆರೋಪ ಪಟ್ಟಿ ದಾಖಲಿಸಲು ಕೋರ್ಟ್ ಅನುಮತಿ, ಆದರೆ ವಿಚಾರಣೆಗೆ ತಡೆ!
ತರುಣ್ ತೇಜ್ ಪಾಲ್
Published On :
ಪಣಜಿ: ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ದಾಖಲಿಸಲು ಅನುಮತಿ ನೀಡಿದ್ದ ಮಾಪುಸಾ ಸೆಷನ್ಸ್ ಕೋರ್ಟ್ ನ ಆದೇಶವನ್ನು ಗೋವಾ ಹೈಕೋರ್ಟ್ ಎತ್ತಿ ಹಿಡಿದಿದ್ದು, ಆರೋಪ ಪಟ್ಟಿ ದಾಖಲಿಸಲು ಅನುಮತಿ ನೀಡಿದೆ. ಆದರೆ ಮುಂದಿನ ನಿರ್ದೇಶನದ ವರೆಗೆ ವಿಚಾರಣೆಗೆ ತಡೆ ನೀಡಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಸಾಕ್ಷಿಯ ವಿಚಾರಣೆಯನ್ನು ತಾನು ನಿರ್ದೇಶನ ನೀಡುವವರೆಗೆ ನಡೆಸದಂತೆ ಕೋರ್ಟ್ ಸೂಚನೆ ನೀಡಿದೆ. ತೇಜ್ ಪಾಲ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸೆ.07 ರಂದು ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿತ್ತು. 
ತರುಣ್ ತೇಜ್ ಪಾಲ್ ವಿರುದ್ಧ 9 ಆರೋಪ ದಾಖಲಾಗುವ ಸಾಧ್ಯತೆ ಇದೆ. 2013 ರಲ್ಲಿ ಎಲಿವೇಟರ್ ನಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಕಿಕ ಕಿರುಕುಳ ನೀಡಿರುವ ಆರೋಪ ತರುಣ್ ತೇಜ್ ಪಾಲ್ ವಿರುದ್ಧ ಕೇಳಿಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.