ದೇಶ

ಪತ್ರಕರ್ತ ಕೆಜೆ. ಸಿಂಗ್'ಗೆ 14 ಬಾರಿ ಇರಿಯಲಾಗಿತ್ತು: ವೈದ್ಯರು

ದುಷ್ಕರ್ಮಿಗಳ ದಾಳಿಗೊಳಗಾಗಿ ಹತ್ಯೆಗೀಡಾಗಿದ್ದ ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಅವರ ಮೃತದೇಹದ ಮೇಲೆ 14-17 ಬಾರಿ ಇರಿದಿರುವ ಗಾಯಗಳಿದ್ದವು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಹೇಳಿದ್ದಾರೆ...

ಪತ್ರಕರ್ತ ಕೆಜೆ. ಸಿಂಗ್'ಗೆ 14 ಬಾರಿ ಇರಿಯಲಾಗಿತ್ತು: ವೈದ್ಯರು
ಪತ್ರಕರ್ತ ಕೆ.ಜೆ. ಸಿಂಗ್ ಹಾಗೂ ಅವರ ತಾಯಿ ಗುರು ಚರಣ್ ಕೌರ್
Published On :
ಚಂಡೀಗಢ: ದುಷ್ಕರ್ಮಿಗಳ ದಾಳಿಗೊಳಗಾಗಿ ಹತ್ಯೆಗೀಡಾಗಿದ್ದ ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಅವರ ಮೃತದೇಹದ ಮೇಲೆ 14-17 ಬಾರಿ ಇರಿದಿರುವ ಗಾಯಗಳಿದ್ದವು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಸಿಂಗ್ ಅವರ ಮನೆಯೊಳಗೆ ನುಗ್ಗಿದ್ದ ದುಷ್ಕರ್ಮಿಗಳ ಗುಂಪೊಂದು ಪತ್ರಕರ್ತ ಕೆ.ಜೆ. ಸಿಂಗ್ ಅವರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿತ್ತು. ಇದೇ ವೇಳೆ ಮನೆಯಲ್ಲಿದ್ದ ಸಿಂಗ್ ಅವರ ತಾಯಿ ಗುರುಚರಣ್ ಕೌರ್ ಅವರ ಉಸಿರುಗಟ್ಟಿಸಿ ಕೊಲೆ ಮಾಡಿಲಾಗಿತ್ತು. 
ಹತ್ಯೆ ಬಳಿಕ ಮೂರು ಸದಸ್ಯರ ಸರ್ಕಾರಿ ನಾಗರೀಕ ಆಸ್ಪತ್ರೆ ವೈದ್ಯರ ತಂಡ ಸಿಂಗ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿತ್ತು. ಪರೀಕ್ಷೆ ವೇಳೆ ಸಿಂಗ್ ಅವರ ದೇಹದ ಮೇಲೆ 14-17 ಬಾರಿ ಚೂರಿಯಿಂದ ಇರಿದಿರುವ ಗಾಯಗಳಿರುವುದು ಕಂಡು ಬಂದಿದೆ. ಈಗಾಗಲೇ ಮರಣೋತ್ತರ ವರದಿಯನ್ನು ಸಿದ್ಧಪಡಿಸಿರುವ ವೈದ್ಯರ ತಂಡ ಶೀಘ್ರದಲ್ಲಿಯೇ ವಿಶೇಷ ತನಿಖಾಧಿಕಾರಿಗಳ ವಶಕ್ಕೆ ನೀಡಲಿದೆ. 
ಹತ್ಯೆಯಾದ ಬಳಿಕ ಪತ್ರಕರ್ತ ಸಿಂಗ್ ಹಾಗೂ ಆವರ ತಾಯಿಯವರ ಫೋನ್ ಗಳು ಕಾಣೆಯಾಗಿದ್ದು, ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇದೀಗ ಸಿಂಗ್ ಅವರ ದೂರವಾಣಿ ಕರೆಗಳ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 
ಈಗಾಗಲೇ ಸಿಂಗ್ ಅವರ ಎರಡು ನೆರೆಮನೆಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.