ಪಾಟ್ನಾ: ಸಹೋದ್ಯೋಗಿಯನ್ನು ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಸತ್ತ ಸೈನಿಕ
ಸೈನಿಕನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡಿಕ್ಕಿಕೊಂಡು ಸತ್ತ ಘಟನೆ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ನಡೆದಿದೆ.

Published On :
ಪಾಟ್ನಾ: ಸೈನಿಕನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡಿಕ್ಕಿಕೊಂಡು ಸತ್ತ ಘಟನೆ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ನಡೆದಿದೆ.
ಇಬ್ಬರೂ ಭಾರತೀಯ ಸೇನೆಯ ಪದಾತಿ ದಳದ ಬಿಹಾರ ರೆಜಿಮೆಂಡ್ ನ ಜವಾನರು. ಬಿಹಾರ ರೆಜಿಮೆಂಟ್ ನ ಕೇಂದ್ರ ಕಛೇರಿ ಪಾಟ್ನಾ ದ ದನಾಪುರದಲ್ಲಿದೆ.
ಸಂತೋಷ್ ಕುಮಾರ್ ಸಿಂಗ್ ತನ್ನ ಸಹೋದ್ಯೋಗಿ ರಿಂಕೇಶ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಂದ ಬಳಿಕ ನಂತರ ತಾನೂ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ. ಇಬ್ಬರ ಮೃತದೇಹಗಳು ಪಾಟ್ನಾ ದ ದನಾಪುರದ ಮಂಗಳಂ ಕಾಲೋನಿ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಅವರು ಬಳಸಿದ್ದ ರೈಫಲ್ ಸಹ ದೊರಕಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
"ಇಬ್ಬರೂ ಕೆಟ್ತ ಪದಗಳನ್ನು ಬಳಸಿ ಜಗಳವಾಡುತ್ತಿದ್ದರು. ಅದೇನು ಕಾರಣಕ್ಕೋ ಆ ಜಗಳ ತಾರಕಕ್ಕೆ ಹೋಗಿತು. ಅಂತಿಮವಾಗಿ ಇಬ್ಬರೂ ಗುಂಡು ಹಾರಿಸಿಕೊಂಡಿದ್ದಾರೆ" ಎಂದು ನೆರೆಮನೆಯಲ್ಲಿ ವಾಸಿಸುತ್ತಿದ್ದವರು ಪೊಲೀಸರಿಗೆ ತಿಳಿಸಿದ್ದಾರೆ. "ಸಾವಿಗೆ ನಿಜವಾದ ಕಾರಣವನ್ನು ಪೋಲೀಸರು ಪತ್ತೆ ಮಾದಲಿದ್ದಾರೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


