ಫಿನ್ ಲ್ಯಾಂಡ್ ನಲ್ಲಿ ಕಣ್ಮರೆಯಾಗಿದ್ದ ಚೆನ್ನೈ ಟೆಕ್ಕಿ ಮೃತದೇಹ ಪತ್ತೆ
ಫಿನ್ ಲ್ಯಾಂಡ್ ನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಚೆನ್ನೈ ನ ಇಂಜಿನುಯರ್ ಹರಿಸೂದನ್ ಮೃತಪಟ್ಟಿದ್ದಾರೆ.

Published On :
ಚೆನ್ನೈ: ಫಿನ್ ಲ್ಯಾಂಡ್ ನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಚೆನ್ನೈ ನ ಇಂಜಿನುಯರ್ ಹರಿಸೂದನ್ ಮೃತಪಟ್ಟಿದ್ದಾರೆ.
ಹರಿಸೂದನ್ ಅವರ ಮೃತದೇಹ ಫಿನ್ ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯ ಸರೋವರ ಪ್ರದೇಶದಲ್ಲಿ ಪತ್ತೆಯಾಗಿದೆ. ಟಾಟಾ ಕನ್ಸಲ್‍ಟೆನ್ಸಿ ಸರ್ವಿಸ್ (ಟಿಸಿಎಸ್) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ಮೃತದೇಹ ಪತ್ತೆಯಾಗಿರುವುದನ್ನು ಫಿನ್ ಲ್ಯಾಂಡ್ ನ ಭಾರತದ ರಾಯಭಾರಿ ವಾಣಿ ರಾವ್ ಖಚಿತಪಡಿಸಿದ್ಧಾರೆ. ಹೆಲ್ಸಿಂಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
"ಈ ಘಟನೆಯಿಂದ ನಮಗೆ ಆಘಾತವಾಗಿದೆ ಮತ್ತು ಅವನ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಾಂತ್ವನವನ್ನು ವ್ಯಕ್ತಪಡಿಸಲು ತಿಳಿಸಬಯಸುತ್ತೇವೆ" ಟಿಸಿಎಸ್ ಸಂಸ್ಥೆ ವಕ್ತಾರರು ಹೇಳಿದ್ದಾರೆ. 2013.ರಿಂದಲೂ ಹರಿಸೂಧನ್ ಟಿಸಿಎಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಹೆಲ್ಸಿಂಕಿ ಪೋಲೀಸರು ಸೆಪ್ಟೆಂಬರ್ 8 ರಂದು 17:40ರ ವೇಳೆಗೆ ಫ್ರೆಡ್ರಿಂಕಿಕುಟು ನಲ್ಲಿ ಇದ್ದ ಹರಿಸೂಧನ್ ರ ಕೊನೆಯ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫಿನ್ ಲ್ಯಾಂಡ್FinlandMissing Chennai techieHelsinkiTata Consultancy Services (TCS)ನಾಪತ್ತೆಯಾಗಿದ್ದ ಚೆನೈ ಟೆಕ್ಕಿಹೆಲ್ಸಿಂಕಿಟಾಟಾ ಕನ್ಸಲ್‍ಟೆನ್ಸಿ ಸರ್ವೀಸಸ್ (ಟಿಸಿಎಸ್)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


