ದೇಶ

ತಿರಂಗ ಧ್ವಜ ಹಾರಿಸಿ, ಪ್ರತಿನಿತ್ಯ ರಾಷ್ಟ್ರಗೀತೆ ಹಾಡಿ; ಮದರಸಾಗಳಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಸೂಚನೆ

ತ್ರಿವರ್ಣ ಧ್ವಜ ಹಾರಿಸಿ, ಪ್ರತೀ ನಿತ್ಯ ಮಕ್ಕಳಿಂದ ರಾಷ್ಟ್ರಗೀತೆಯನ್ನು ಹಾಡಿಸಿ ಎಂದು ಎಲ್ಲಾ ಮದರಸಾಗಳಿದೆ ಮಧ್ಯಪ್ರದೇಶ ಶಿಕ್ಷಣ ಸಚಿವ ಶುಕ್ರವಾರ ಸೂಚಿಸಿದ್ದಾರೆ...

ತಿರಂಗ ಧ್ವಜ ಹಾರಿಸಿ, ಪ್ರತಿನಿತ್ಯ ರಾಷ್ಟ್ರಗೀತೆ ಹಾಡಿ; ಮದರಸಾಗಳಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಸೂಚನೆ
ಮಧ್ಯಪ್ರದೇಶ ಶಿಕ್ಷಣ ಸಚಿವ ವಿಜಯ್ ಶಾ (ಸಂಗ್ರಹ ಚಿತ್ರ)
Published On :
ಭೂಪಾಲ್: ತ್ರಿವರ್ಣ ಧ್ವಜ ಹಾರಿಸಿ, ಪ್ರತೀ ನಿತ್ಯ ಮಕ್ಕಳಿಂದ ರಾಷ್ಟ್ರಗೀತೆಯನ್ನು ಹಾಡಿಸಿ ಎಂದು ಎಲ್ಲಾ ಮದರಸಾಗಳಿದೆ ಮಧ್ಯಪ್ರದೇಶ ಶಿಕ್ಷಣ ಸಚಿವ ಶುಕ್ರವಾರ ಸೂಚಿಸಿದ್ದಾರೆ. 
ಮಧ್ಯಪ್ರದೇಶದ ಮದರಸಾ ಮಂಡಳಿಯ 20ನೇ ಸ್ಥಾಪನಾ ದಿನಾಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮಧ್ಯಪ್ರದೇಶದಲ್ಲಿರುವ ಎಲ್ಲಾ ಮದರಸಾಗಳು ರಾಷ್ಟ್ರಧ್ವಜವನ್ನು ಹಾರಿಸಿ ಮಕ್ಕಳಲ್ಲಿ ದೇಶಭಕ್ತಿಯನ್ನು ತುಂಬುವ ಸಲುವಾಗಿ ಪ್ರತೀನಿತ್ಯ ರಾಷ್ಟ್ರಗೀತೆಯನ್ನು ಹಾಡಿಸಬೇಕು. ಇದರಲ್ಲಿ ಯಾರೊಬ್ಬರಿಗೂ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ಭಾವಿಸಿದ್ದೇನೆಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತನಾಡಿ, ನಮ್ಮ ದೇಶವನ್ನು ಹೇಗೆ ಪ್ರೀತಿಸಬೇಕು. ದೇಶಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಬೇಕೆಂಬುದು ಶಾಲಾ ಪಠ್ಯಕ್ರಮಗಳ ಭಾಗವಾಗಬೇಕು. ನಾವು ಒಂದೇ ನೆಲದ ನೀರನ್ನು ಕುಡಿಯುತ್ತೇವೆ. ಆಹಾರವನ್ನು ಸೇವಿಸುತ್ತೇವೆ. ನಮ್ಮ ರಕ್ತ ಕೆಂಪಾಗಿದೆ. ನಾವು ಹಲವು ಧರ್ಮಗಳನ್ನು ಅನುಸರಿಸಬಹುದು. ವಿದ್ಯಾರ್ಥಿಗಳಿಗೆ ಪ್ರೀತಿ, ಭ್ರಾತೃತ್ವ ಮತ್ತು ದೇಶಭಕ್ತಿ ಬಗ್ಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.