ದೇಶ

ಯಾವುದೇ ಕಾರಣಕ್ಕು ನೋಟು ನಿಷೇಧ ಬೇಕಿರಲಿಲ್ಲ: ಮನಮೋಹನ್ ಸಿಂಗ್

ಯಾವುದೇ ಕಾರಣಕ್ಕೂ ನೋಟು ನಿಷೇಧದಂತಹ ಕಾರ್ಯ ದೇಶಕ್ಕೆ ಬೇಕಿರಲಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ.

ಯಾವುದೇ ಕಾರಣಕ್ಕು ನೋಟು ನಿಷೇಧ ಬೇಕಿರಲಿಲ್ಲ: ಮನಮೋಹನ್ ಸಿಂಗ್
ಪ್ರಧಾನಿ ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)
Published On :
ಮೊಹಾಲಿ: ಯಾವುದೇ ಕಾರಣಕ್ಕೂ ನೋಟು ನಿಷೇಧದಂತಹ ಕಾರ್ಯ ದೇಶಕ್ಕೆ ಬೇಕಿರಲಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರವನ್ನು ದೊಡ್ಡ ವೈಫಲ್ಯ ಎಂದು ಬಣ್ಣಿಸಿರುವ ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್, ನೋಟು ನಿಷೇಧದಿಂದಾಗಿ ದೇಶದ ಆರ್ಥಿಕತೆ ಕೆಳಮುಖವಾಗಿ ಚಲಿಸುವಂತಾಗಿದೆ. ದೇಶದ ಅಭಿವೃದ್ಧಿ ಕುಂಠಿತಗೊಂಡಿದ್ದು, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ನೋಟು ನಿಷೇಧಂತಹ ಸಾಹಸ ಬೇಕಿರಲಿಲ್ಲ ಎಂದು ಹೇಳಿದ್ದಾರೆ.

ಪಂಜಾಬ್ ನ ಮೊಹಾಲಿಯಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್ಬಿ) ಲೀಡರ್ಶಿಪ್ ಶೃಂಗಸಭೆ ಪಾಲ್ಗೊಂಡು ಮಾತನಾಡಿದ 90ರ ದಶಕದ ದೇಶದ ಆರ್ಥಿಕ ಸುಧಾರಣೆಯ ಶಿಲ್ಪಿ ಕೂಡ ಆಗಿರುವ ಮನಮೋಹನ್ ಸಿಂಗ್ ಅವರು, ಲ್ಯಾಟಿನ್ ಅಮೆರಿಕ ದೇಶಗಳ ಹೊರತಾಗಿ ವಿಶ್ವದ ಯಾವುದೇ ನಾಗರಿಕ ದೇಶಗಳಲ್ಲೂ ನೋಟು ನಿಷೇಧ ಯಶಕಂಡಿಲ್ಲ ಎಂದು ಹೇಳಿದ್ದಾರೆ.

"ನನ್ನ ಪ್ರಕಾರ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ತೀರಾ ಕೆಟ್ಟ ನಿರ್ಧಾರವಾಗಿತ್ತು. ದೇಶಕ್ಕೆ ಯಾವುದೇ ಪರಿಸ್ಥಿತಿಯಲ್ಲೂ ನೋಟು ನಿಷೇಧದಂತಹ ದುಸ್ಸಾಹಸ ಬೇಕಿರಲಿಲ್ಲ. ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಇದು ನಿಜಕ್ಕೂ ದೇಶಕ್ಕೆ ದೊಡ್ಡ ಹೊಡೆತವಾಗಿದೆ. ನೋಟು ನಿಷೇಧದಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿ ಶೇ.30ರಷ್ಟು ಕುಸಿದಿದ್ದು, ಬಂಡವಾಳ ಹೂಡಿಕೆ ಪ್ರಮಾಣ ಶೇ.37ರಿಂದ 30ಕ್ಕೆ ಕುಸಿದಿದೆ. ನೋಟು ನಿಷೇಧ ಪರಿಣಾಮ ಖಾಸಗಿ ಹೂಡಿಕೆ ಪ್ರಮಾಣ ಇಂದಿಗೂ ಏರಿಕೆಯಾಗುತ್ತಿಲ್ಲ. ಜಿಡಿಪಿಯಲ್ಲಿ ಸಾರ್ವಜನಿಕ ವಲಯದ ಹೂಡಿಕೆ ಕೇವಲ ಶೇ.30ರಷ್ಟಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.