ಡೇರಾ ಮುಖ್ಯಸ್ಥ ರಾಮ್ ರಹೀಮ್ - ಹನಿಪ್ರೀತ್ ನಡುವೆ ಅಕ್ರಮ ಸಂಬಂಧವಿತ್ತು: ಮಾಜಿ ಪತಿ
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ....

Published On :
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ತಲೆಮರೆಸಿಕೊಂಡಿರುವ ಆತನ 'ದತ್ತು ಪುತ್ರಿ' ಎನ್ನಲಾಗುತ್ತಿರುವ ಹನಿಪ್ರೀತ್ ನಡುವೆ ಅಕ್ರಮ ಸಂಬಂಧವಿತ್ತು. ಅವರಿಬ್ಬರೂ ಒಂದೇ ಬೆಡ್ ರೂಂನಲ್ಲಿ ಮಲಗುತ್ತಿದ್ದರು ಎಂದು ಆಕೆಯ ಮಾಜಿ ಪತಿ ವಿಶ್ವಾಸ್ ಗುಪ್ತಾ ಶುಕ್ರವಾರ ಬಹಿರಂಗಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ, ಹನಿಪ್ರೀತ್ ಬಾಬಾನ ದತ್ತುಪುತ್ರಿಯೇ ಅಲ್ಲ, ಇದೆಲ್ಲಾ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಬಾಬಾನ ನಾಟಕವಾಗಿತ್ತು ಎಂದು ಆರೋಪಿಸಿದ್ದಾರೆ.
ಬಾಬಾ ಮತ್ತು ಹನಿಪ್ರೀತ್ ಅಪ್ಪ, ಮಗಳಂತೆ ಇರಲಿಲ್ಲ, ಅವರು ಗಂಡ ಹೆಂಡತಿ ರೀತಿ ಇದ್ದರು. ಒಂದೇ ಬೆಡ್ ನಲ್ಲಿ ರಾಮ್ ರಹೀಮ್ ಮತ್ತು ಹನಿಪ್ರೀತ್ ಮಲಗುತ್ತಿದ್ದರು. ಯಾವ ತಂದೆ ತನ್ನ ಮಗಳೊಂದಿಗೆ ಮಲಗುತ್ತಾರೆ ಹೇಳಿ? ಎಂದು ವಿಶ್ವಾಸ್ ಪ್ರಶ್ಮಿಸಿದ್ದಾರೆ.
ಬೆಡ್ ರೂಂನಲ್ಲಿ ಬಾಬಾ ಮತ್ತು ಹನಿಪ್ರೀತ್ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ನಾನು ನೋಡಿದ್ದೇನೆ. ಹನಿಪ್ರೀತ್ ತನ್ನ ಮಗಳೆಂದು ಆತ ಹೇಳುತ್ತಿದ್ದನಾದರೂ ಇಬ್ಬರ ನಡುವೆ ತಂದೆ-ಮಗಳ ಸಂಬಂಧವಿರಲಿಲ್ಲ. ಅಕ್ರಮ ಸಂಬಂಧವಿತ್ತು ಎಂದು ದೂರಿದ್ದಾರೆ. ಅಲ್ಲದೆ ಬಾಬಾನಿಂದ ನನಗೆ ಜೀವ ಬೆದರಿಕೆ ಇತ್ತು ಎಂದು ತಿಳಿಸಿದ್ದಾರೆ.
ಹೊರಗಡೆ ಹೋಗುವಾಗ ನನಗೆ ಕಾರು ಡ್ರೈವ್ ಮಾಡಲು ಹೇಳಿ ತಾವಿಬ್ಬರು ಹಿಂದಿನ ಸೀಟ್‌ನಲ್ಲಿ ಕುಳಿತುಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬ ಮಾಹಿತಿ ಸಹ ಆತ ಹೊರಹಾಕಿದ್ದಾನೆ.
ನಾನು ಹಾಗೂ ನನ್ನ ಕುಟುಂಬ ಡೇರಾ ಬಾಬಾನಿಗೆ ತುಂಬಾ ನಿಕಟವಾಗಿತ್ತು. 1999ರಲ್ಲಿ ನಾನು ಹನಿಪ್ರೀತ್ ಜತೆ ವಿವಾಹವಾಗಿದ್ದೆ. ನಾನು ಅವಳನ್ನು ನೋಡದೆಯೇ ಮದುವೆ ಆಗಿದ್ದೆ. ಗುರ್ಮಿತ್ ನನ್ನ ಮಗ ಎಂಬಂತೆ ಉಪಚರಿಸುತ್ತಿದ್ದ. ಆದರೆ ಡೇರಾ ಪೂರ್ಣಪ್ರಮಾಣದಲ್ಲಿ ಬಾಬಾನ ನಿಯಂತ್ರಣದಲ್ಲಿಯೇ ಇರುತ್ತಿತ್ತು ಎಂದಿದ್ದಾರೆ.
ಅಷ್ಟೇ ಅಲ್ಲ ಡೇರಾದೊಳಗಿನ ಗುಹೆಯಲ್ಲಿ ಬಿಗ್ ಬಾಸ್ ರೀತಿಯಲ್ಲಿ ದೊಡ್ಡ ಮಟ್ಟದ ಗೇಮ್ ಅನ್ನು ನಡೆಸುತ್ತಿದ್ದ, ಅಲ್ಲಿ ನಾವು 6 ಮಂದಿ (ಗಂಡ -ಹೆಂಡತಿ) ಸುಮಾರು 28 ದಿನಗಳ ಕಾಲ ಕಳೆಯಬೇಕಾಗಿತ್ತು. ಈ ಗೇಮ್ ನಲ್ಲಿ ಸೋತವರು ಬಾಬಾನ ಜತೆ ಗುಹೆಯಲ್ಲಿ ಕಾಲ ಕಳೆಯಬೇಕಾಗಿತ್ತು. ಹಾಗಾಗಿ ಹನಿಪ್ರೀತ್ ಬೇಕಂತಲೇ ಗೇಮ್ ನಲ್ಲಿ ಸೋಲುತ್ತಿದ್ದಳು ಎಂದು ವಿವರಿಸಿದ್ದಾರೆ.
ಈಗಾಗಲೇ ತಪ್ಪಿಸಿಕೊಂಡಿರುವ ಹನಿಪ್ರೀತ್‌ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಇಲ್ಲಿಯವರೆಗೆ ಆಕೆಯ ಕುರಿತು ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


