ಪಾತಕಿ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ: ಸಹೋದರ ಕಸ್ಕರ್ ಹೇಳಿಕೆ
ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂದು ಆತನ ಸಹೋದರ ಇಕ್ಬಾಲ್ ಕಸ್ಕರ್ ಹೇಳಿದ್ದಾನೆ.

Published On :
ಮುಂಬೈ: ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂದು ಆತನ ಸಹೋದರ ಇಕ್ಬಾಲ್ ಕಸ್ಕರ್ ಹೇಳಿದ್ದಾನೆ.
ಸುಲಿಗೆ ಪ್ರಕರಣ ಸಂಬಂಧ ಮುಂಬೈನ ಥಾಣೆ ಪೊಲೀಸರಿಂದ ಬಂಧನಕ್ಕೀಡಾಗಿರುವ ಇಕ್ಬಾಲ್ ಕಸ್ಕರ್, ತನ್ನ ಸಹೋದರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂದು ಹೇಳಿದ್ದಾನೆ. ಪ್ರಮುಖವಾಗಿ ದಾವೂದ್ ಇಬ್ರಾಹಿಂಗೆ ಭಾರತ ಸರ್ಕಾರದ ಕುರಿತು ಆತಂಕವಿದ್ದು, ಇದೇ ಕಾರಣಕ್ಕೆ ಆಗಾಗ ಮನೆ ಬದಲಿಸುತ್ತಿದ್ದಾನೆ. ಪ್ರಮುಖವಾಗಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂದು ಕಸ್ಕರ್ ಮಾಹಿತಿ ನೀಡಿದ್ದಾನೆ.
ಅಲ್ಲದೆ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ಇದ್ದುಕೊಂಡು ಪೂರ್ವ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಹೂಡಿಕೆ ಮಾಡಿ ತನ್ನ ವಾಣಿಜ್ಯ ವಹಿವಾಟು ನಡೆಸುತ್ತಿದ್ದಾನೆ. ದಾವೂದ್ ಲ್ಯಾಟಿನ್ ಅಮೆರಿಕ ಮೂಲದ ಮಾದಕವವಸ್ತು ದಂಧೆಕೋರರೊಂದಿಗೆ ನಂಟಿದ್ದು, ದಾವೂದ್ ಪಾಕಿಸ್ತಾನದಲ್ಲಿ ಅತ್ಯಂತ ಬಿಗಿ ಭದ್ರತೆ ಇದ್ದು, ಸದಾಕಾಲ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಆತನ ನೆರವಿಗಿರುತ್ತಾರೆ ಎಂದು ಕಸ್ಕರ್ ಹೇಳಿದ್ದಾನೆ.
2003ರವರೆಗೂ ಯುನೈಟೆಡ್ ಅರಬ್ ನಲ್ಲಿ ಇದ್ದ ಕಸ್ಕರ್ ಅಲ್ಲಿ ರಿಯಲ್ ಎಸ್ಟೇಟ್ ಅಕ್ರಮವೆಸಗಿ ಭಾರತಕ್ಕೆ ಗಡಿಪಾರಾಗಿ ಬಂದಿದ್ದ. ಇತ್ತೀಚೆಗೆ ಈತನನ್ನು ಮುಂಬೈ ಪೊಲೀಸರು ಸಲಿಗೆ ಪ್ರಕರಣ ಸಂಬಂಧ ಬಂಧಿಸಿದ್ದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈPoliceಪೊಲೀಸ್Dawood Ibrahimದಾವೂದ್ ಇಬ್ರಾಹಿಂಸುಲಿಗೆIqbal Kaskarಇಕ್ಬಾಲ್ ಕಸ್ಕರ್extortionಅಂಡರ್ ವರ್ಲ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.