ಉ.ಪ್ರ. ರೈತನ 1.ರು ಸಾಲಮನ್ನಾ: ಆಧಾರ್ ಲಿಂಕ್ ನಂತರ ಪೂರ್ಣ: ಜಿಲ್ಲಾಧಿಕಾರಿ
ಉತ್ತರ ಪ್ರದೇಶ ಸರ್ಕಾರದ ಸಾಲಮನ್ನಾ ಯೋಜನೆಯಡಿ 1 ರು. ಸಾಲಮನ್ನಾ ಮಾಡಿದ್ದ ರೈತ ತನ್ನ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಿದ ನಂತರ ಪೂರ್ಣ ...

Published On :
ಮಥುರಾ: ಉತ್ತರ ಪ್ರದೇಶ ಸರ್ಕಾರದ ಸಾಲಮನ್ನಾ ಯೋಜನೆಯಡಿ 1 ರು. ಸಾಲಮನ್ನಾ ಮಾಡಿದ್ದ ರೈತ ತನ್ನ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಿದ ನಂತರ ಪೂರ್ಣ ಸಾಲಮನ್ನಾವಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಥುರಾದ ರೈತ ಚಿಡ್ಡಿ ಸಿಂಗ್ ಎಂಬುವರ 1 ಲಕ್ಷ ರು ಹಣ ಸಾಲಕ್ಕೆ ಬದಲಾಗಿ 1 ರು ಸಾಲಮನ್ನಾ ಮಾಡಲಾಗಿತ್ತು.ರೈತ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ ಕೂಡಲೇ ಉಳಿದ ಹಣ ಮನ್ನಾ ಆಗುತ್ತದ ಎಂಗು ಜಿಲ್ಲಾಧಿಕಾರಿ ಅರವಿಂದ ಮಲ್ಲಪ್ಪ ಬಂಗಾರಿ ಹೇಳಿದ್ದಾರೆ.
ಸಾಲಮನ್ನಾ ಯೋಜನೆಯ ಮೊದಲ ಹಂತವಾಗಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ್ದವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿತ್ತು.
ರೈತ ಚಿಡ್ಡಿಸಿಂಗ್ 2011 ರಲ್ಲಿ ಗೋವರ್ದನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದರು. ದಾಖಲಾತಿಗಳು ಸರಿಯಿಲ್ಲದ ಕಾರಣ ಬೇರೆ ಬ್ಯಾಂಕ್ ಜೊತೆ ಆತನ ಖಾತೆಯನ್ನು ಮತ್ತೆ ಒಪನ್ ಮಾಡಲಾಯಿತು. ಮೊದಲನೇ ಖಾತೆ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲಾಗಿತ್ತು. ಹೀಗಾಗಿ ಆ ಸಂಖ್ಯೆ ಆಯ್ಕೆಯಾಗಿತ್ತು. ಮಾರ್ಚ್ 31, 2016ರ ವರೆಗೆ 1 ರು. ಸಾಲಮನ್ನಾ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ ನಂತರ ಚಿಡ್ಡಿ ಸಿಂಗ್ ಸಾಲ 2,22,222 ರು ಆಗಿದ್ದು, ಆತನಿಗೆ ಶೀಘ್ರವೇ 1 ಲಕ್ಷ ರು ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


