ದೇಶ

ಗುಜರಾತ್: ಸನ್ನಿ ಲಿಯೋನ್ ನವರಾತ್ರಿ ಕಾಂಡೋಮ್ ಜಾಹೀರಾತಿಗೆ ತೀವ್ರ ಅಸಮಾಧಾನ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತೊಂದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ...

ಗುಜರಾತ್: ಸನ್ನಿ ಲಿಯೋನ್ ನವರಾತ್ರಿ ಕಾಂಡೋಮ್ ಜಾಹೀರಾತಿಗೆ ತೀವ್ರ ಅಸಮಾಧಾನ!
ಸನ್ನಿಲಿಯೋನ್ ಜಾಹೀರಾತು ಫಲಕ
Published On :
ಗುಜರಾತ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತೊಂದಕ್ಕೆ ಸೂರತ್ ಮೂಲದ ಸಂಘಟನೆಯೊಂದು ಆಕ್ಷೇಪ ವ್ಯಕ್ತಪಡಿಸಿದೆ. 
ನವರಾತ್ರಿ ಸಂದರ್ಭದಲ್ಲಿ ಹಾಕಿರುವ ಈ ಜಾಹೀರಾತು ಫಲಕದಲ್ಲಿ ಸನ್ನಿ ಲಿಯೋನ್ ಫೋಟೋ ಇದ್ದು, ಗುಜರಾತಿ ಭಾಷೆಯಲ್ಲಿ ಆ ನವರಾತ್ರಿ ಅ ರಾಮೊ, ಪರಂತು ಪ್ರೇಮ್ತಿ (ಈ ನವರಾತ್ರಿಯಲ್ಲಿ ಪ್ರೀತಿಯಿಂದ ಆಡೋಣ) ಎಂದು ಬರೆದಿದೆ.
ನಗರದ ವಿವಿಧ ಭಾಗಗಳಲ್ಲಿ ಜಾಹೀರಾತು ಫಲಕಗಳನ್ನಿರಿಸಿದ್ದು, ಈ ರೀತಿ ಜಾಹೀರಾತಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆಲ್ ಇಂಡಿಯಾ ಟ್ರೇಡರ್ಸ್ ಒಕ್ಕೂಟಕ್ಕೆ ದೂರು ನೀಡಲಾಗಿದೆ. 
ನವರಾತ್ರಿ ಹಬ್ಬದ ಹೆಸರಿನಲ್ಲಿ ಯುವಕರು  ಹೆಚ್ಚೆಚ್ಚು ಪ್ರಮಾಣದಲ್ಲಿ ಕಾಂಡೋಮ್ ಬಳಸುವಂತೆ ಪ್ರೋತ್ಸಾಹಿಸಲಾಗುತ್ತಿದೆ, ಆದರೆ ಜಾಹೀರಾತಿನಲ್ಲಿ ಎಲ್ಲಿಯೂ ಕಾಂಡೋಮ್ ಎಂಬ ಪದ ಬಳಸಿಲ್ಲ, ಪ್ಲೇ, ಲವ್, ನವರಾತ್ರಿ ಎಂಬ ಪದಗಳನ್ನು ಬಳಸಲಾಗಿದ್ದು ಜಾಹೀರಾತಿನ ಉದ್ದೇಶ ಸ್ಪಷ್ಟವಾಗಿದೆ ಎಂದು ಆಲ್ ಇಂಡಿಯಾ ಟ್ರೇಡರ್ಸ್ ಒಕ್ಕೂಟದ  ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡ್ರೇವಾಲ್ ಹೇಳಿದ್ದಾರೆ.
ಈ ಜಾಹೀರಾತು ಫಲಕದ ಬಗ್ಗೆ ಟ್ವಿಟರ್‍‍ನಲ್ಲಿ  ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.ಜಾಹೀರಾತು ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿರುವ ಗುಜರಾತಿನ ವ್ಯಾಪಾರಿ ಸಂಘಟನೆ ಗ್ರಾಹಕರ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರವೊಂದನ್ನು ಬರೆದು ಜಾಹೀರಾತನ್ನು ನಿಷೇಧಿಸುವಂತೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.