ಜಡೆ ಜಗಳಕ್ಕೆ ಕಾರಣವಾಯ್ತು ತೆಲಂಗಾಣ ಸರ್ಕಾರದ ಸೀರೆ ಉಡುಗೊರೆ!
ತೆಲಂಗಾಣ ಭಾಗದ ಖ್ಯಾತ ಬತುಕಮ್ಮ ಜಾತ್ರೆ ನಿಮಿತ್ತ ರಾಜ್ಯದ ಬಡ ಮಹಿಳೆಯರಿಗೆ ತೆಲಂಗಾಣ ಸರ್ಕಾರದ ಸೀರೆ ಭಾಗ್ಯ ಯೋಜನೆ ಇದೀಗ ವಿವಾದಕ್ಕೀಡಾಗಿದ್ದು, ಸೀರೆ ವಿತರಣೆಯಲ್ಲಿ ಲೋಪ ಹಾಗೂ ಕಳಪೆ ಗುಣಮಟ್ಟದ ಸೀರೆ ವಿತರಣೆಯಿಂದಾಗಿ ಮಹಿಳೆಯರು ತೆಲಂಗಾಣ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Published On :
ಹೈದರಾಬಾದ್: ತೆಲಂಗಾಣ ಭಾಗದ ಖ್ಯಾತ ಬತುಕಮ್ಮ ಜಾತ್ರೆ ನಿಮಿತ್ತ ರಾಜ್ಯದ ಬಡ ಮಹಿಳೆಯರಿಗೆ ತೆಲಂಗಾಣ ಸರ್ಕಾರದ ಸೀರೆ ಭಾಗ್ಯ ಯೋಜನೆ ಇದೀಗ ವಿವಾದಕ್ಕೀಡಾಗಿದ್ದು, ಸೀರೆ ವಿತರಣೆಯಲ್ಲಿ ಲೋಪ ಹಾಗೂ ಕಳಪೆ ಗುಣಮಟ್ಟದ ಸೀರೆ ವಿತರಣೆಯಿಂದಾಗಿ ಮಹಿಳೆಯರು ತೆಲಂಗಾಣ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬತುಕಮ್ಮ ಜಾತ್ರೆ ನಿಮಿತ್ತ ಸೋಮವಾರ ತೆಲಂಗಾಣ ಸರ್ಕಾರದ ರಾಜ್ಯಾದ್ಯಂತ ಬಡ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಿತ್ತು. ಆದರೆ ಈ ಸೀರೆ ವಿತರಣೆ ಇದೀಗ ಮಹಿಳೆಯರ ಕಾದಾಟಕ್ಕೆ ಕಾರಣವಾಗಿದ್ದು, ಸೀರೆ ವಿತರಣಾ ಕೇಂದ್ರಗಳ ಬಳಿ ಭಾರಿ ಪ್ರಮಾಣದಲ್ಲಿ ನೆರೆದಿದ್ದ ಮಹಿಳೆಯರು ಸರತಿ ಸಾಲಲ್ಲಿ ನಿಂತು ಸೀರೆ ಪಡೆಯಬೇಕಿತ್ತು. ಆದರೆ ಈ ವೇಳೆ ಸಂಭವಿಸಿದ ಘರ್ಷಣೆಯಿಂದಾಗಿ ಮಹಿಳೆಯರು ಜಡೆಗಳನ್ನು ಹಿಡಿದು ಜಗಳ ಮಾಡಿಕೊಂಡಿರುವ ದೃಶ್ಯಾವಳಿಗಳು ಇದೀಗ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೆ ಸರ್ಕಾರ ನೀಡಿರುವ ಸೀರೆಗಳ ಗುಣಮಟ್ಟ ಕೂಡ ಕಳಪೆಯಾಗಿದೆ ಎಂದು ಆರೋಪಿಸಿ ಹಲವು ಮಹಿಳೆಯರು ಸೀರೆಗಳನ್ನು ಬಹಿರಂಗವಾಗಿಯೇ ಸುಟ್ಟು ಹಾಕಿದ್ದಾರೆ. ಅಲ್ಲದೆ ಬಡ ಹೆಣ್ಣುಮಕ್ಕಳಿಗೆ ಕಳಪೆ ಗುಣಮಟ್ಟದ ಸೀರೆಗಳನ್ನು ವಿತರಣೆ ಮಾಡುವ ಮೂಲಕ ಸಿಎಂ ಕೆಸಿಆರ್ ಅಪಮಾನ ಮಾಡಿದ್ದಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಇಂತಹ ಸೀರೆಗಳನ್ನು ನೀಡುತ್ತಿದ್ದರೆ ಎಂದು ಕೆಲ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬತುಕಮ್ಮ ಜಾತ್ರೆ ದಸರಾ ಹಬ್ಬದಂತೆಯೇ ಒಂಭತ್ತು ದಿನಗಳ ಕಾಲ ನಡೆಯಲಿದ್ದು, ಇಲ್ಲಿ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ ಹೂವಿನ ರಂಗೋಲಿ ಮುಂದೆ ನೃತ್ಯ ಮಾಡುತ್ತಾರೆ. ತೆಲಂಗಾಣ ಭಾಗದಲ್ಲಿ ಖ್ಯಾತವಾಗಿರುವ ಈ ಹಬ್ಬವನ್ನು ಈ ಬಾರಿ ಸರ್ಕಾರದ ವತಿಯಿಂದಲೇ ಆಯೋಜಿಸಲಾಗಿತ್ತು. ಇದಕ್ಕಾಗಿ ರಾಜ್ಯದ ಎಲ್ಲ ಬಡ ಮಹಿಳೆಯರಿಗೆ ತೆಲಂಗಾಣ ಸರ್ಕಾರ ಸೀರೆ ನೀಡುವುದಾಗಿ ಘೋಷಿಸಿತ್ತು. ಇದಕ್ಕಾಗಿ ತೆಲಂಗಾಣದ ಅಧಿಕಾರಿಗಳು ಸುಮಾರು 500 ವಿವಿಧ ವಿನ್ಯಾಸದ ಸೀರೆಗಳನ್ನು ಆಯ್ಕೆ ಮಾಡಿದ್ದರು. ಈ ಪೈಕಿ ಅರ್ಧದಷ್ಟು ಗುಜರಾತ್‌ನ ಸೂರತ್‌ನಲ್ಲೂ, ಉಳಿದವು ತೆಲಂಗಾಣದ ಪವರ್‌ಲೂಮ್‌ಗಳಲ್ಲೂ (ವಿದ್ಯುತ್ ಮಗ್ಗ) ತಯಾರಾಗಿದ್ದವು.
ಇದೀಗ ಈ ಸೀರೆ ಭಾಗ್ಯ ಯೋಜನೆ ಸರ್ಕಾರಕ್ಕೆ ಒಳ್ಳೆಯ ಪ್ರಚಾರ ನೀಡುವ ಬದಲು ವಿವಾದಕ್ಕೊಳಗಾಗಿದ್ದು, ಸರ್ಕಾರದ ವಿರುದ್ಧ ಮಹಿಳೆಯರು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಸೀರೆ ವಿವಾದಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಇದು ಪ್ರತಿಪಕ್ಷ ಕಾಂಗ್ರೆಸ್‌ನ ಪಿತೂರಿ ಎಂದು ಟಿಆರ್‌ಎಸ್ ದೂರಿದೆ. ವಿಧಾನ ಸಭೆ ಚುನಾವಣೆ ಇನ್ನೂ 20 ತಿಂಗಳುಗಳಷ್ಟು ದೂರವಿದೆ. ಅಷ್ಟರಲ್ಲಿ ಟಿಆರ್‌ಎಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hyderabadಹೈದರಾಬಾದ್Bathukamma festivalTelangana GovernmentSaree Giftಬತುಕಮ್ಮ ಜಾತ್ರೆತೆಲಂಗಾಣ ಸರ್ಕಾರಸೀರೆ ಉಡುಗೋರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.