ದೇಶ

ರೋಹಿಂಗ್ಯ ಹಿಂಸಾಚಾರದಲ್ಲಿ ಮಡಿದವರಿಗಾಗಿ ಪ್ರಾರ್ಥನ ಸಭೆ: ಬಿಜೆಪಿ ಮುಸ್ಲಿಂ ಮಹಿಳಾ ನಾಯಕಿ ಅಮಾನತು

ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರಿಗಾಗಿ ಪ್ರಾರ್ಥನ ಸಭೆ ಆಯೋಜಿಸಿದ್ದ ಆರೋಪದ ಮೇಲೆ ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯನ್ನು ಪಕ್ಷ ಅಮಾನತು ಮಾಡಿದೆ...

ರೋಹಿಂಗ್ಯ ಹಿಂಸಾಚಾರದಲ್ಲಿ ಮಡಿದವರಿಗಾಗಿ ಪ್ರಾರ್ಥನ ಸಭೆ: ಬಿಜೆಪಿ ಮುಸ್ಲಿಂ ಮಹಿಳಾ ನಾಯಕಿ ಅಮಾನತು
ಬೆನಜಿರ್ ಅರ್ಫಾನ್
Published On :
ಗುವಾಹಟಿ: ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರಿಗಾಗಿ ಪ್ರಾರ್ಥನ ಸಭೆ ಆಯೋಜಿಸಿದ್ದ ಆರೋಪದ ಮೇಲೆ ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯನ್ನು ಪಕ್ಷ ಅಮಾನತು ಮಾಡಿದೆ. 
ಭಾರತೀಯ ಜನತಾ ಮಜ್ದೂರ್ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸದಸ್ಯೆ ಬೆನಜಿರ್ ಅರ್ಫಾನ್ ಅವರು ಮತ್ತೊಂದು ಸಂಸ್ಥೆ ಆಯೋಜಿಸಿದ್ದ ಪ್ರದರ್ಶನಕ್ಕೆ ಜನರನ್ನು ಆಕರ್ಷಿಸಲು ಬಿಜೆಪಿ ಸಾಮಾಜಿಕ ಮಾಧ್ಯಮ ವೇದಿಕೆ ಬಳಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಶೋಕಾಸ್ ನೋಟೀಸ್ ನೀಡಿದೆ. 
ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರ ಮೇಲೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರಿಗಾಗಿಎನ್ಜಿಒ ಯುನೈಟೆಡ್ ಮೈನಾರಿಟಿ ಪೀಪಲ್ಸ್ ಫೋರಂ  ಪ್ರಾರ್ಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 
ನಾನು ತ್ರಿವಳಿ ತಾಲಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದಲ್ಲಿ ನಿಂತಿದ್ದೆ. ಇದೀಗ ಪಕ್ಷ ವಿವರಿಸಲು ಅವಕಾಶ ನೀಡದೆ ನನಗೆ ತಲಾಕ್ ನೀಡಿದೆ ಎಂದು ಅರ್ಫಾನ್ ಹೇಳಿದ್ದಾರೆ. 
ರೋಹಿಂಗ್ಯ ಮುಸ್ಲಿಂರ ಸಮಸ್ಯೆ ಕುರಿತಂತೆ ಯಾವುದೇ ಮಾಹಿತಿ ನೀಡದೇ ಪಕ್ಷದ ಪೂರ್ವಾನುಮತಿ ಪಡೆಯದೇ ಪಕ್ಷದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿದ್ದರಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯ ಬೆನಜಿರ್ ರ ಅಮಾನತು ಆದೇಶಕ್ಕೆ ಸಹಿ ಹಾಕಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.