ದೇಶ

ಮುಂಬೈ: ಆರ್.ಕೆ. ಸ್ಟುಡಿಯೋದಲ್ಲಿ ಅಗ್ನಿ ಅವಘಡ

ಇಂದು ಮಧ್ಯಾಹ್ನ ಮುಂಬೈನ ಚೆಂಬೂರ್ ನಲ್ಲಿರುವ ಪ್ರಸಿದ್ಧ ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಮುಂಬೈ: ಆರ್.ಕೆ. ಸ್ಟುಡಿಯೋದಲ್ಲಿ ಅಗ್ನಿ ಅವಘಡ
ಮುಂಬೈಯ ಆರ್ ಆರ್ ಕೆ ಸ್ಟುಡಿಯೋದಲ್ಲಿ ಬೆಂಕಿ ಅವಘದ
Published On :
ಮುಂಬೈ: ಇಂದು ಮಧ್ಯಾಹ್ನ ಮುಂಬೈ ನ  ಚೆಂಬೂರ್ ನಲ್ಲಿರುವ  ಪ್ರಸಿದ್ಧ ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಸ್ಟುಡಿಯೋದ ಇಲೆಕ್ಟ್ರಿಕ್‌ ವಿಭಾಗದಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಅಗ್ನಿ ಶಾಮಕ ಘಟಕಗಳು ಸ್ಥಳವನ್ನು ತಲುಪಿದ್ದು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಬೆಂಕಿಯನ್ನು ನಿಯಂತ್ರಿಸಲು ಐದು ವಾಟರ್‌ ಟಾಂಕರ್‌ಗಳನ್ನು ಸಹ ಕರೆಸಿಕೊಳ್ಳಲಾಗಿದೆ.
ನಗರದ ಚೆಂಬೂರ್‌ ನಲ್ಲಿರುವ ಆರ್‌ ಕೆ ಸ್ಟುಡಿಯೋದ ಹಾಲ್‌ ನಂಬರ್‌ 1 ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇಲೆಕ್ಟ್ರಿಕ್‌ ವಿಭಾಗದಲ್ಲಿ ವಯರಿಂಗ್‌ ಕೆಲಸ ನಡೆಯುತ್ತಿದ್ದಾಗ ವಿದ್ಯುತ್‌ ಶಾರ್ಟ್‌ ಸರ್‌ ಕ್ಯೂಟ್‌  ಉಂಟಾಗಿ ಬೆಂಕಿ ಅವಘಡ ಉಂಟಾಯಿತೆಂದು ತಿಳಿಯಲಾಗಿದೆ.
ದುರಂತದಲ್ಲಿ ಯಾವುದೇ ಜೀವ ಹಾನಿ ಉಂಟಾದ ಅಥವಾ ಯಾರಿಗೂ ಗಾಯಗಳಾದ ವರದಿಗಳು ಬಂದಿಲ್ಲ.
ಸೂಪರ್‌ ಡ್ಯಾನ್ಸರ್‌ ಎಂಬ ಟಿವಿ ಶೋ ಸೆಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆಯಾದರೂ ಇಂದು ಶನಿವಾರವಾದ್ದರಿಂದ ಯಾವುದೇ ಸಿಬಂದಿ ಸೆಟ್‌ ನಲ್ಲಿ  ಹಾಜರಿರಲಿಲ್ಲ ಎನ್ನಲಾಗಿದೆ
ಆರ್‌ ಕೆ ಸ್ಟುಡಿಯೋವನ್ನು 1948ರಲ್ಲಿ ಬಾಲಿವುಡ್‌ನ‌ "ದಿ ಗ್ರೇಟ್‌ ಶೋ ಮ್ಯಾನ್‌' ಎಂದೇ ಖ್ಯಾತರಾಗಿದ್ದ ರಾಜ್‌ ಕಪೂರ್ ಸ್ಥಾಪನೆ ಮಾಡಿದ್ದರು. ಈಗ ರಾಜ್ ಕರೂರ್ ಅವರ ಮಗ ರಿಷಿ ಕಪೂರ್ ಈ ಸ್ಟುಡಿಯೋದ ಕಾರ್ಯ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.