ಪರಶುರಾಮ ಸಹ ಇಂಜಿನಿಯರ್ ಆಗಿರಬೇಕು: ಮನೋಹರ್ ಪರಿಕ್ಕರ್
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಗೋವಾವನ್ನು ಸೃಷ್ಟಿಸಿದವನು ಎಂದು ನಂಬಲಾದ ಪರಶುರಾಮ, ಸಮುದ್ರದಿಂದ ಭೂಮಿಯನ್ನು ಪಡೆದಿರುವ ಇಂಜಿನಿಯರ್ ಆಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Published On :
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಗೋವಾವನ್ನು ಸೃಷ್ಟಿಸಿದವನು ಎಂದು ನಂಬಲಾದ ಪರಶುರಾಮ, ಸಮುದ್ರದಿಂದ ಭೂಮಿಯನ್ನು ಪಡೆದಿರುವ ಇಂಜಿನಿಯರ್ ಆಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಇಂಜಿನಿಯರ್ ದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪರಿಕ್ಕರ್ ಅವರು, "ಈ ದಿನವು ಭಾರತ ಇಂಜಿನಿಯರ್ ಗಳ ಪ್ರತಿಭೆ, ಪ್ರಾಮುಖ್ಯತೆಯನ್ನು ಗುರುತಿಸುವ ದಿನ" ಎಂದರು.
ಪುರಾಣದ ಪ್ರಕಾರ ಗೋವಾ ಮೂಲವನ್ನು ಉಲ್ಲೇಖಿಸುತ್ತಾ, "ಪರಶುರಾಮ ಗೋವಾ ಅನ್ನು ರಚಿಸಿದನು. ನಾನು ಪರಶುರಾಮ ಸಮುದ್ರದಿಂದ ಭೂಮಿ ಪಡೆದ ಕಾರನ ಇಂಜಿನಿಯರ್ ಕುಲಕ್ಕೆ ಸೇರಿದವನು ಎಂದು ನಂಬಬಹುದು."
"ಹಸ್ತಿನಾಪುರ, ಪಾಂಡವ ಅರಮನೆಗಳಂತಹ ಎಲ್ಲಾ ರೀತಿಯ ವಾಸ್ತು ಶೈಲಿಯ ಬಗ್ಗೆ ನಮಗೆ ಸಾವಿರ ವರ್ಷಗಳ ಹಿಂದೆಯೇ. ತಿಳಿದಿತ್ತು "
"ಇಂಜಿನಿಯರಿಂಗ್ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಅತ್ಯಂತ ಹಳೆಯ ಕಲೆ ಮತ್ತು ಕೌಶಲ್ಯವಾಗಿದೆ. ಅದುವೇ ಆಧುನಿಕ ಯುಗದಲ್ಲಿ ಗುರುತಿಸಲ್ಪಟ್ಟಿದೆ " ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Manohar Parikkarಮನೋಹರ್ ಪರಿಕ್ಕರ್Goaಗೋವಾengineerಇಂಜಿನಿಯರ್Engineers DayLord Parashuramಪರಶುರಾಮಇಂಜಿನಿಯರ್ಸ್ ಡೇ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


