ಅಮರನಾಥ ದಾಳಿ ರುವಾರಿ ಇಸ್ಮಾಯಿಲ್ ಹತ್ಯೆ: ಸೇನೆಯನ್ನು ಕೊಂಡಾಡಿದ ರಕ್ಷಣಾ ತಜ್ಞರು
ಅಮರನಾಥ ಯಾತ್ರಿಕರ ಮೇಲಿನ ದಾಳಿ ಪ್ರಕರಣ ಪ್ರಮುಖ ರುವಾರಿಯಾಗಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ನನ್ನು ಹತ್ಯೆ ಮಾಡಿರುವ ಭಾರತೀಯ ಸೇನೆಯನ್ನು ರಕ್ಷಣಾ ತಜ್ಞರು ಶುಕ್ರವಾರ...

Published On :
ನವದೆಹಲಿ: ಅಮರನಾಥ ಯಾತ್ರಿಕರ ಮೇಲಿನ ದಾಳಿ ಪ್ರಕರಣ ಪ್ರಮುಖ ರುವಾರಿಯಾಗಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ನನ್ನು ಹತ್ಯೆ ಮಾಡಿರುವ ಭಾರತೀಯ ಸೇನೆಯನ್ನು ರಕ್ಷಣಾ ತಜ್ಞರು ಶುಕ್ರವಾರ ಕೊಂಡಾಡಿದ್ದಾರೆ.
ಅಬು ಇಸ್ಮಾಯಿಲ್ ಹತ್ಯೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಇಸ್ಮಾಯಿಲ್ ಹತ್ಯೆ ಭಾರತೀಯ ಸೇನೆಗೆ ದೊರಕಿರುವ ದೊಡ್ಡ ಯಶಸ್ಸಾಗಿದೆ. ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಇಸ್ಮಾಯಿಲ್ ಭಾಗಿಯಾಗಿದ್ದ. ಹೀಗಾಗಿ ಆತನಿಗಾಗಿ ಸಾಕಷ್ಟು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು. ಇಸ್ಮಾಯಿಲ್ ಹತ್ಯೆ, ಬಂಧನ ಪ್ರಮುಖವಾಗಿತ್ತು. ಆತನ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಉಗ್ರರಿಗೆ ನೀಡಲಾಗುತ್ತಿದ್ದ ನೈತಿಕರೆ ಹಾಗೂ ಪ್ರೇರಣಗಳು ನೆಲ ಕಚ್ಚಲಿದೆ ಎಂದು ಹೇಳಿದ್ದಾರೆ.
ಇದರಂತೆ ಮತ್ತೊಬ್ಬ ರಕ್ಷಣಾ ತಜ್ಞ ಖ್ವಾಮರ್ ಅಘಾ ಅವರು ಮಾತನಾಡಿ. ಇಸ್ಮಾಯಿಲ್ ಹತ್ಯೆ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಗೆ ದೊರಕಿರುವ ದೊಡ್ಡ ಯಶಸ್ಸಾಗಿದೆ. ಆತನ ಹತ್ಯೆಯಿಂದಾಗಿ ಭದ್ರತಾ ಪಡೆಗಳಿಗೆ ನಿರಾಳ ದೊರಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹತ್ಯೆKashmirKilledಕಾಶ್ಮೀರDefence Expertsರಕ್ಷಣಾ ತಜ್ಞರುAbu Ismailಅಬು ಇಸ್ಮಾಯಿಲ್Lashkar commanderಲಷ್ಕರ್ ಕಮಾಂಡರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


