ದೆಹಲಿ-ಎನ್ ಸಿಆರ್ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ: ಸುಪ್ರೀಂ ಕೋರ್ಟ್ ಆದೇಶದಲ್ಲಿ ಮಾರ್ಪಾಡು
ಕಳೆದ ವರ್ಷ ನವೆಂಬರ್ ನಲ್ಲಿ ರಾಷ್ಟ್ರ ರಾಜಧಾನಿ ವಲಯ (ಎನ್ ಸಿಆರ್) ದಲ್ಲಿ ಪಟಾಕಿ ಮಾರಾಟ ಶಾಶ್ವತ ಪರವಾನಗಿಗಳನ್ನು ಅಮಾನತು ಗೊಳಿಸುವ ಆದೇಶವನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ.

Published On :
ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ರಾಷ್ಟ್ರ ರಾಜಧಾನಿ ವಲಯ (ಎನ್ ಸಿಆರ್) ದಲ್ಲಿ ಪಟಾಕಿ ಮಾರಾಟ ಶಾಶ್ವತ ಪರವಾನಗಿಗಳನ್ನು ಅಮಾನತು ಗೊಳಿಸುವ ಆದೇಶವನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ.
ಕಾಲಮಿತಿಗೆ ಒಳಪಟ್ಟು ಪಟಾಕಿ ಮಾರಾಟ ಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ದೀಪಾವಳಿಯ ನಂತರ ದೆಹಲಿ ವಾಯುಗುಣದಲ್ಲಿನ ರಾಸಾಯನಿಕ ಪ್ರಮಾಣವನ್ನು ಪರಿಶೀಲಿಸಿ ಮುಂದಿನ ಆದೇಶ ನೀಡುವುದಾಗಿ ಅದು ತಿಳಿಸಿದೆ.
ನ್ಯಾಯಾಧೀಶರಾದ ಎಂ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಒಳಗೊಂಡ ಪೀಠವು ಒಬ್ಬೊಬ್ಬರೇ ಪತಾಕಿ ಹಚ್ಚಿ ಸಂಭ್ರಮಿಸುವ ಬದಲು ಜನ ಸಮುದಾಯ ಒಟ್ಟಾಗಿ ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಬಾಗವಹಿಸುವಂತೆ ಕೇಂದ್ರ ಸರ್ಕಾರ, ಸಂಬಂಡ ಪಟ್ಟ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕೆಂದು ಹೇಳಿದೆ.
ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಜನರ ಆರೋಗ್ಯದ ಮೇಲೆ ಪಟಾಕಿಯ ಪರಿಣಾಮವನ್ನು ಅಧ್ಯಯನ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಜಿ) ಅಧ್ಯಕ್ಷರು ನೇತೃತ್ವ ವಹಿಸಬೇಕೆಂದು ಉನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಆದರೆ ಈಗಾಗಲೇ ನೀಡಿರುವ ಪರವಾನಗಿಯಲ್ಲಿ ಶೇ. 50 ರಷ್ಟನ್ನು ರದ್ದುಗೊಳಿಸಬೇಕು. ಒಟ್ತಾರೆ ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ 500.ಪರವಾನಗಿ ಮಾತ್ರ ಹೊಂದಲು ಅನುಮತಿ ನೀದಬೇಕೆಂದು ದೆಹಲಿ ಪೋಲೀಸರಿಗೆ ಕೋರ್ಟ್ ಆದೇಶಿಸಿದೆ.
"2016 ರ ನವೆಂಬರ್ 11 ರ ನಿರ್ದೇಶಿಸಿದಂತೆ ಶಾಶ್ವತ ಪರವಾನಗಿಯನ್ನು ಅಮಾನತ್ ಗೊಳಿಸುವ ಆದೇಶವನ್ನು ಈ ಮೂಲಕ ತೆಗೆದು ಹಾಕಲಾಗಿದೆ" ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸುಪ್ರೀಂ ಕೋರ್ಟ್ಪಟಾಕಿThe Supreme Courtfire crackersNational Capital Region (NCR)Delhiರಾಷ್ಟ್ರ ರಾಜಧಾನಿ ವಲಯ (ಎನ್ ಸಿಆರ್)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


