ಸುನಂದಾ ಪುಷ್ಕರ್ ಹತ್ಯೆ ಪ್ರಕರಣ: ಹೊಟೇಲ್ ರೂಂ ತೆರೆಯುವಂತೆ ಪೊಲೀಸರಿಗೆ ಕೋರ್ಟ್ ಆದೇಶ
ಕಾಂಗ್ರೆಸ್ ಮಾಜಿ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದ ಪುಷ್ಕರ್ ಮೃತದೇಹ ಸಿಕ್ಕಿದ್ದ ಹೊಟೇಲ್ ಲೀಲಾ ಪ್ಯಾಲೆನ್ಸ್ ನ ನಂಬರ್ 345 ರೂಂ ಅನ್ನು...

Published On :
ನವದೆಹಲಿ: ಕಾಂಗ್ರೆಸ್ ಮಾಜಿ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದ ಪುಷ್ಕರ್ ಮೃತದೇಹ ಸಿಕ್ಕಿದ್ದ ಹೊಟೇಲ್ ಲೀಲಾ ಪ್ಯಾಲೆನ್ಸ್ ನ ನಂಬರ್ 345 ರೂಂ ಅನ್ನು ತೆರೆಯುವಂತೆ ದೆಹಲಿ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
ಇನ್ನು ನಾಲ್ಕು ವಾರಗಳಲ್ಲಿ ಕೊಠಡಿಯನ್ನು ತೆರೆಯುವಂತೆ ದೆಹಲಿಯ ಪಟಿಯಾಲ ಕೋರ್ಟ್ ಆದೇಶಿಸಿದೆ. ಇದಕ್ಕೂ ಮುನ್ನ ಉಪ ಪೊಲೀಸ್ ಆಯುಕ್ತ ಈಶ್ವರ್ ಸಿಂಗ್ ಅವರು ಪಟಿಯಾಲ ಕೋರ್ಟ್ ಗೆ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ(ಸಿಎಫ್ಎಸ್ಎಲ್) ತಂಡದ ವರದಿಯನ್ನು ಸಲ್ಲಿಸಿದ್ದು ಈ ವೇಳೆ ಇನ್ನು ಹೆಚ್ಚಿನ ತನಿಖೆಗಾಗಿ ಹೆಚ್ಚಿನ ಕಾಲಾವಕಾಶ ಕೇಳಿದರು.
ಪೊಲೀಸ್ ಉಪ ಆಯುಕ್ತರ ಅವಧಿ ವಿಸ್ತರಣೆಯನ್ನು ನಿರಾಕರಿಸಿದ ನ್ಯಾಯಾಧೀಶರು ಮೂರುವರೆ ವರ್ಷದಿಂದ ಕೊಠಡಿಯನ್ನು ಮುಚ್ಚಲಾಗಿದ್ದು ಇದರಿಂದ ಹೊಟೇಲ್ ಮಾಲೀಕರಿಗೆ ಹೆಚ್ಚಿನ ನಷ್ಟವಾಗಿದೆ. ಹೀಗಾಗಿ ಕೊಠಡಿಯನ್ನು ತೆರೆಯುವಂತೆ ಪೊಲೀಸರಿಗೆ ಆದೇಶಿಸಿದರು.
ಈ ವೇಳೆ ನ್ಯಾಯಾಧೀಶರು ಕೊಠಡಿಯಲ್ಲಿ ತನಿಖೆಗೆ ಅಗತ್ಯವಾದ ವಸ್ತುಗಳು ಇದ್ದರೆ ಅವುಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಅಲ್ಲದೆ ಸೆಪ್ಟೆಂಬರ್ 26ರೊಳಗೆ ಮತ್ತಷ್ಟು ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


