ಸಿಎಂ ಬದಲಾಗದಿದ್ದರೆ, ಇಡೀ ಸರ್ಕಾರವನ್ನೇ ಉರುಳಿಸಲು ಸಿದ್ಧ: ಟಿಟಿವಿ ದಿನಕರನ್ ಎಚ್ಚರಿಕೆ
ತಮಿಳುನಾಡು ಸಿಎಂ ಪಳನಿಸ್ವಾಮಿ ಅವರನ್ನು ಬದಲಿಸದಿದ್ದರೆ ಇಡೀ ಸರ್ಕಾರವನ್ನು ಉರುಳಿಸುವುದಾಗಿ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಟಿಟಿವಿ ದನಕರನ್ ಹೇಳಿದ್ದಾರೆ.

Published On :
ಚೆನ್ನೈ: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರನ್ನು ಬದಲಿಸದಿದ್ದರೆ ಇಡೀ ಸರ್ಕಾರವನ್ನು ಉರುಳಿಸುವುದಾಗಿ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಟಿಟಿವಿ ದನಕರನ್ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಟಿವಿ ದಿನಕರನ್, ಎಐಎಡಿಎಂಕೆ ಪಕ್ಷದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಅದು ಪ್ರಧಾನ ಕಾರ್ಯದರ್ಶಿಗಳು ಮಾತ್ರ..ಹೀಗಾಗಿ ಪ್ರಸ್ತುತ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ವಿಕೆ ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಪಕ್ಷ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಒಂದು ವೇಳೆ ನಿಯಮಾವಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡರೆ ಸರ್ಕಾರ ಉರುಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಂತೆಯೇ ಸಿಎಂ ಪಳನಿಸ್ವಾಮಿ ಬದಲಾವಣೆಗೆ ಆಗ್ರಹಿಸಿರುವ ದಿನಕರನ್, ಒಂದು ವೇಳೆ ಸಿಎಂ ಬದಲಾಗದಿದ್ದರೆ ಇಡೀ ಸರ್ಕಾರವನ್ನೇ ಉರುಳಿಸಲೂ ಕೂಡ ತಾವು ಯೋಚಿಸುವುದಿಲ್ಲ. ತಮ್ಮ ಬೆಂಬಲಿಗ ಶಾಸಕರೂ ಕೂಡ ಸಿಎ ಪಳನಿಸ್ವಾಮಿ ವಿರುದ್ಧ ಅವಿಶ್ವಾಸ ಹೊಂದಿದ್ದು, ಅವರ ಬದಲಾವಣೆಗೆ ಆಗ್ರಹಿಸಿದ್ದಾರೆ. ಅಂತೆಯೇ "ಅನಧಿಕೃತ" ಎಐಎಡಿಎಂಕೆ ಪಕ್ಷದ ಸಾಮಾನ್ಯಸಭೆಯಲ್ಲಿ ಪಾಲ್ಗೊಳ್ಳುವ ಶಾಸಕ ಹಾಗೂ ಮುಖಂಡರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ದಿನಕರನ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಥವಾ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಉಪ ಕಾರ್ಯದರ್ಶಿಗಳು ಮಾತ್ರ ಸಾಮಾನ್ಯ ಸಭೆ ಕರೆಯಬಹುದಾಗಿದೆ. ಹೀಗಾಗಿ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆಯುವ ಸಭೆಗೆ ಯಾವುದೇ ಮಾನ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AIADMKChennaiಚೆನ್ನೈಎಐಎಡಿಎಂಕೆಶಶಿಕಲಾSasikalaTTV DinakaranTamilNadu Politicsತಮಿಳುನಾಡು ರಾಜಕೀಯgeneral council meetingಸಾಮಾನ್ಯ ಸಭೆಟಿಟಿವಿ ದಿನಕರನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


