ದೇಶ

ಅಗತ್ಯಬಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 'ಸರ್ಜಿಕಲ್ ಸ್ಟ್ರೈಕ್' ಮಾಡುತ್ತೇವೆ: ಭಾರತೀಯ ಸೇನೆ!

ಗಡಿಯಲ್ಲಿ ದೇಶ ವಿದ್ರೋಹ ಚಟುವಟಿಕೆಗಳು ಕಂಡುಬಂದರೆ ಅಗತ್ಯವಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ಮಾಡುತ್ತೇವೆ ಎಂದು ಭಾರತೀಯ ಸೇನೆ ಶುಕ್ರವಾರ ಸ್ಪಷ್ಟಪಡಿಸಿದೆ.

ಅಗತ್ಯಬಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 'ಸರ್ಜಿಕಲ್ ಸ್ಟ್ರೈಕ್' ಮಾಡುತ್ತೇವೆ: ಭಾರತೀಯ ಸೇನೆ!
ಸಂಗ್ರಹ ಚಿತ್ರ
Published On :
ನವದೆಹಲಿ: ಗಡಿಯಲ್ಲಿ ದೇಶ ವಿದ್ರೋಹ ಚಟುವಟಿಕೆಗಳು ಕಂಡುಬಂದರೆ ಅಗತ್ಯವಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ಮಾಡುತ್ತೇವೆ ಎಂದು ಭಾರತೀಯ ಸೇನೆ ಶುಕ್ರವಾರ  ಸ್ಪಷ್ಟಪಡಿಸಿದೆ.
ಕಳೆದ ವರ್ಷ ನಡೆದ ಸರ್ಜಿಕಲ್ ಸ್ಟ್ರೈಕ್ ದಾಳಿ ಭಾರತ ಪಾಕಿಸ್ತಾನ ಹಾಗೂ ವಿಶ್ವ ಸಮುದಾಯಕ್ಕೆ ಸ್ಪಷ್ಟ ಸಂದೇಶವಾಗಿದ್ದು, ದೇಶದ ವಿರುದ್ಧ ಯಾವುದೇ ವಿದ್ರೋಹಕ ಚಟುವಟಿಕೆಗಳು ನಡೆದರೆ ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೇನೆ  ಕಾರ್ಯಾಚರಣೆ ನಡೆಸಿಯೇ ತೀರುತ್ತದೆ. ಎಲ್ ಒಸಿಯಲ್ಲಿ ಭಾರತ ಅಗತ್ಯ ಬಿದ್ದಾಗಲೆಲ್ಲಾ ಕಾರ್ಯಾಚರಣೆ ನಡೆಸುತ್ತದೆ ಎಂದು ಸೇನೆ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಕಾಶ್ಮೀರದ ಉದ್ಧಂಪುರ್ ನಲ್ಲಿ ನಡೆದ ಸೈನಿಕರಿಗ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ ಹಾಗೂ ಉತ್ತರ ವಿಭಾಗದ ಕಮಾಂಡಿಂಗ್ ಆಫೀಸರ್ ಕೂಡ ಆಗಿರುವ ದೇವರಾಜ್ ಅನ್ಬು  ಅವರು, ಎಲ್ ಒಸಿ ನಾವು ಕಾರ್ಯಾಚರಣೆ ನಡೆಸಲಾಗದ ಪ್ರದೇಶವೇನೂ ಅಲ್ಲ. ಅದು ಪಾಕ್ ಆಕ್ರಮಿತ ಕಾಶ್ಮೀರ ವಷ್ಟೇ..ದೇಶದ ಭದ್ರತೆಗೆ ಧಕ್ಕೆಯಾಗುವ ಅಥವಾ ದೇಶ ವಿದ್ರೋಹ ಚಟುವಟಿಕೆಗಳು ಪಿಒಕೆ ಗಡಿಯಲ್ಲಿ ನಡೆದರೆ  ಖಂಡಿತಾ ನಾವು ಅದನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂಬುದಕ್ಕೆ ಸರ್ಜಿಕಲ್ ಸ್ಟ್ರೈಕ್ ಉದಾಹರಣೆಯಷ್ಟೇ.. ಮುಂದೆ ಪಿಒಕೆ ಗಡಿಯಲ್ಲಿ ಉಗ್ರರ ಕ್ಯಾಂಪ್ ಗಳು ತಲೆ ಎತ್ತಿದರೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುತ್ತದೆ  ಎಂದು ಹೇಳಿದರು.
ಡೊಕ್ಲಾಂ ನಲ್ಲಿ ಪರಿಸ್ಥಿತಿ ಗಂಭೀರವಾಗಿಲ್ಲ
ಇನ್ನು ಇಂಡೋ-ಚೀನಾ ಗಡಿ ಡೊಕ್ಲಾಂ ನಲ್ಲಿ ಮತ್ತೆ ಪರಿಸ್ಥಿತಿ ಬಿಗಡಾಯಿಸಿದೆ ಎಂಬ ಸುದ್ದಿ ಕುರಿತು ಮಾತನಾಡಿದ ಅವರು, ಅಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಅವರ ಗಡಿಯಲ್ಲಿ  ಅವರು ಪಹರೆ ನಡೆಸುತ್ತಿದ್ದಾರೆ. ನಮ್ಮ  ಗಡಿಯಲ್ಲಿ ನಾವು ಗಸ್ತು ತಿರುಗುತ್ತಿದ್ದೇವೆ. ಇದು ಸಾಮಾನ್ಯ ಪ್ರಕ್ರಿಯೆಯಷ್ಟೇ...ಭಾರತ ತನ್ನ ಗಡಿ ರಕ್ಷಣೆಗೆ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.