ನದಿ ಜೋಡಣೆ: ಮುಖ್ಯಮಂತ್ರಿಗಳ ಸಭೆ ಕರೆಯಲು ನಿತಿನ್ ಗಡ್ಕರಿ ನಿರ್ಧಾರ
ನದಿ ಜೋಡಣೆ ಸಂಬಂಧ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ

Published On :
ನವದೆಹಲಿ: ನದಿ ಜೋಡಣೆ ಸಂಬಂಧ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ ಎನ್ ಡಿಎ ಸರ್ಕಾರದ ಪ್ರಮುಖ ಯೋಜನೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿಗಳ ಸಭೆ ಕಕರೆಯಲು ಅವರು ನಿರ್ಧರಿಸಿದ್ದಾರೆ.
ಜಲ ಸಂಪನ್ಮೂಲಗಳ ಸಚಿವಾಲಯ ಕೆಲಸವನ್ನು ಪರಿಶೀಲಿಸಿದ ಗಡ್ಕರಿ, ಮೂರು ನದಿ ಜೋಡಣೆ ಯೋಜನೆಗಳಾದ ಕೆನ್-ಬೆಟ್ವಾ, ದಮಾಂಗಂಗಾ-ಪಿಂಜಲ್ ಮತ್ತು ಪರ್-ತಪಿ-ನರ್ಮದಾಗಳನ್ನು ತಕ್ಷಣದ ಪ್ರಾರಂಭಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನದಿ ಜೋಡಣೆಯು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಬರಗಾಲದ ಸಮಸ್ಯೆಯನ್ನು ಪರಿಹರಿಸಲಿದೆಎಂದು ಗಡ್ಕರಿ ಹೇಳಿದರು.
"ಅಟಲ್ ಜಿ ಕನಸನ್ನು ನನಸಾಗಿಸಲು ಮತ್ತು ನದಿಗಳ ಜೋಡಣೆ ಅನ್ನು ತ್ವರಿತಗೊಳಿಸಲು ನಾನು ನಿರ್ಧರಿಸಿದ್ದೇನೆ. ಬಾಕಿ ಉಳಿದಿರುವ ನದಿ ನೀರು ವಿವಾದಾಂಶಗಳನ್ನು ಬಗೆಹರಿಸಲು ನಾನು ಮುಖ್ಯಮಂತ್ರಿಗಳ ಸಭೆ ಕರೆಯಲಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ.
ದೇಶದ ಮೊದಲ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಮಧ್ಯ ಪ್ರದೇಶದಲ್ಲಿ ಪ್ರಾರಂಭಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
NDANitin Gadkariನಿತಿನ್ ಗಡ್ಕರಿಎನ್ ಡಿಎUnion Water Resources Ministerriver-interlinking projectchief ministers meetingನದಿ ಜೋಡಣೆಕೇಂದ್ರ ಜಲ ಸಂಪನ್ಮೂಲ ಸಚಿವಮುಖ್ಯಮಂತ್ರಿಗಳ ಸಭ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


