ಬಿಜೆಪಿ-ಆರ್ ಎಸ್ ಎಸ್ ಸಿದ್ಧಾಂತಗಳ ಬಗ್ಗೆ ಮಾತನಾಡಿದರೆ ಕೊಲ್ಲುತ್ತಾರೆ: ರಾಹುಲ್ ಗಾಂಧಿ
ಹಿರಿಯ ಪತ್ರಕರ್ತೆ ಹಾಗೂ ವಿಚಾರವಾಗಿ ಹತ್ಯೆ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ್ದಾರೆ.

Published On :
ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಹತ್ಯೆ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ರಾಹುಲಾ ಗಾಂಧಿ ಅವರು, "ಕರ್ನಾಟಕದಲ್ಲಿ ದಿಟ್ಟ ಪತ್ರಕರ್ತೆ, ನೇರ ನುಡಿಯ ಚಿಂತಕಿ ಗೌರಿ ಲಂಕೇಶ್ ರನ್ನು ಹತ್ಯೆ ಮಾಡಲಾಗಿದೆ. ಅಹಿಂಸೆಯೇ ಈ ದೇಶದ ಇತಿಹಾಸ. ಕೊಲೆಯನ್ನು ಯಾರೂ ಸಮರ್ಥಿಸುವಂತಿಲ್ಲ. ಪ್ರಧಾನಿ ಮೋದಿ ಅವರೋರ್ವ ಕೌಶಲ ಹಿಂದೂ ರಾಜಕಾರಣಿ. ಮೋದಿ ಏನೇ ಹೇಳಿದರೂ ಅದರಲ್ಲಿ ಎರಡು ಅರ್ಥವಿರುತ್ತದೆ. ಪತ್ರಕರ್ತೆಯೊಬ್ಬಳು ಮತಾಂಧರಿಗೆ ಬಲಿಯಾಗಿರುವುದು ನಿಜಕ್ಕೂ ದೊಡ್ಡ ದುರದೃಷ್ಟಕರ".
"ಜನ ಪ್ರಧಾನಿ ಮೋದಿ ಮೌನಿ ಎಂದು ಹೇಳುತ್ತಾರೆ. ಆದರೆ ಗಮನಿಸಬೇಕಾದ ಅಂಶವೆಂದರೆ ನರೇಂದ್ರ ಮೋದಿ ಅವರ ಒಟ್ಟಾರೆ ಚಿಂತನೆಯೇ ಜನರ ಧ್ವನಿಯನ್ನು ದಮನಿಸುವುದೇ ಆಗಿದೆ. ತಮ್ಮ ಮತ್ತು ತಮ್ಮ ಪಕ್ಷದ ವಿರುದ್ಧ ಅಥವಾ ಆರ್ ಎಸ್ಎಸ್ ವಿರುದ್ಧ ಮಾತನಾಡದಂತೆ ಒತ್ತಡ ಹೇರುತ್ತಾರೆ. ಇಲ್ಲವಾದರೆ ಅವರನ್ನು ಕೊಲ್ಲುತ್ತಾರೆ. ಕೆಲವೊಮ್ಮೆ ಪ್ರಧಾನಿ ಮೋದಿ ಅವರು ಒತ್ತಡಕ್ಕೆ ಮಣಿದು ಮೌನ ಮುರಿಯುತ್ತಾರೆ; ಆದರೆ ಅವರ ಒಟ್ಟು ಮೌನದ ಹಿಂದಿನ ಉದ್ದೇಶವೇ ಜನರ ಧ್ವನಿಯನ್ನು ದಮನಿಸುವುದು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್New DelhiPM Modiಪ್ರಧಾನಿ ಮೋದಿRahul Gandhiರಾಹುಲ್ ಗಾಂಧಿಗೌರಿ ಲಂಕೇಶ್ ಹತ್ಯೆGauri Lankesh Death
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


