ಅರುಣಾಚಲ ಪ್ರದೇಶ-ಮ್ಯಾನ್ಮಾರ್ ಗಡಿ: ಸೇನಾ ಕಾರ್ಯಾಚರಣೆ, ಎನ್ಎಸ್ ಸಿಎನ್ ಕೇಡರ್ ಹತ್ಯೆ
ಅರುಣಾಚಲ ಪ್ರದೇಶದಲ್ಲಿ ಭಾರತ-ಮ್ಯಾನ್ಮಾರ್ ಗಡಿಭಾಗದಲ್ಲಿ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ....

Published On :
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತ-ಮ್ಯಾನ್ಮಾರ್ ಗಡಿಭಾಗದಲ್ಲಿ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಉಗ್ರಗಾಮಿ ಸಂಘಟನೆಯ ಕೇಡರ್ ಮೃತಪಟ್ಟಿದ್ದು ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಎಕೆ-56 ಹಲ್ಲೆ ರೈಫಲ್, ಹ್ಯಾಂಡ್ ಗ್ರೆನೇಡ್, ಒಂದು ರೇಡಿಯೊ ಸೆಟ್, 200 ಸುತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ಅರುಣಾಚಲ ಪ್ರದೇಶದ ಲಾಂಗ್ ಡಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಭಾರತೀಯ ಸೇನಾ ಮೂಲಗಳ ಪ್ರಕಾರ, ಕಾರ್ಯಾಚರಣೆ ಇಂದು ಬೆಳಗ್ಗೆ 730ರ ಸುಮಾರಿಗೆ ನಡೆದಿದ್ದು ಇನ್ನು ಕೂಡ ಮುಂದುವರಿದಿದೆ.
ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್, ಇದೊಂದು ಸಹಜ ದೈನಂದಿನ ಕಾರ್ಯಚರಣೆಯಾಗಿತ್ತು. ಇಂತಹ ಕಾರ್ಯಾಚರಣೆ ಪ್ರತಿದಿನ ನಡೆಯುತ್ತವೆ. ಇದರಲ್ಲೇನು ವಿಶೇಷವಿಲ್ಲ ಎನ್ನುತ್ತಾರೆ.
ಇದು ಗಡಿ ಭಾಗದ ಮಿಲಿಟರಿ ದಾಳಿ ಕೂಡ ಅಲ್ಲ ಎಂದು ಸೇನಾಪಡೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಭಾರತARMSಮ್ಯಾನ್ಮಾರ್ಶಸ್ತ್ರಾಸ್ತ್ರArunachal Pradeshಅರುಣಾಚಲ ಪ್ರದೇಶAmunitionsIndia-MyanmarNSCN(K) cadreಎನ್ಎಸ್ ಸಿಎನ್(ಕೆ) ಕೇಡರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


