ದೇಶ

ರೈಲ್ವೇ ಸಚಿವಾಲಯಕ್ಕೆ ವಿದಾಯ?: ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ ಸುರೇಶ್ ಪ್ರಭು

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲ್ವೇ ಸಚಿವಾಲಯ ತೊರೆಯಲಿದ್ದಾರೆ ಎಂಬ ಸುದ್ದಿಗೆ ಇಂಬು ನೀಡುವಂತೆ ಸ್ವತಃ ಸುರೇಶ್ ಪ್ರಭು ಅವರೇ ಹೇಳಿಕೆ ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಭಾನುವಾರ ಟ್ವೀಟ್ ಮಾಡಿದ್ದಾರೆ.

ರೈಲ್ವೇ ಸಚಿವಾಲಯಕ್ಕೆ ವಿದಾಯ?: ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ ಸುರೇಶ್ ಪ್ರಭು
ಸಂಗ್ರಹ ಚಿತ್ರ
Published On :
ನವದೆಹಲಿ: ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲ್ವೇ ಸಚಿವಾಲಯ ತೊರೆಯಲಿದ್ದಾರೆ ಎಂಬ ಸುದ್ದಿಗೆ ಇಂಬು ನೀಡುವಂತೆ ಸ್ವತಃ ಸುರೇಶ್ ಪ್ರಭು ಅವರೇ ಹೇಳಿಕೆ ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ನೂತನವಾಗಿ ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿರುವ 9 ಮಂದಿ ಸಚಿವರಿಗೆ ಹಾಗೂ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದ ನಾಲ್ವರು ಕೇಂದ್ರ ಸಚಿವರಿಗೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಶುಭಕೋರಿದ್ದು, "ಟೀಂ ಮೋದಿ ತಂಡಕ್ಕೆ ಶುಭಾಶಯ. ಹೊಸ ಜವಾಬ್ದಾರಿಗಳನ್ನು ಹೊತ್ತಿದ್ದೀರಿ, ನಮ್ಮ ದೇಶವನ್ನು ಉತ್ತಮಗೊಳಿಸುವುದೇ ನಮ್ಮ ಸಾಮಾನ್ಯ ಯೋಜನೆಯಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ರೈಲ್ವೇ ಇಲಾಖೆಯ 13 ಲಕ್ಷ ಸಿಬ್ಬಂದಿಗಳಿಗೂ ಧನ್ಯವಾದ ಹೇಳಿರುವ ಸುರೇಶ್ ಪ್ರಭು ಅವರು, ರೈಲ್ವೇ ಸಿಬ್ಬಂದಿಗಳು ಹಾಗೂ ಅವರ ಕುಟುಂಬಸ್ಥರ ಬೆಂಬಲ, ಪ್ರೀತಿ ಹಾಗೂ ಒಳ್ಳೆಯ ಗುಣಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣವನ್ನೂ ನಾನು ಮರೆಯುವುದಿಲ್ಲ. ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಸುರೇಶ್ ಪ್ರಭು ಅವರು ತಾವು ರೈಲ್ವೇ ಖಾತೆಯನ್ನು ತೊರೆಯುತ್ತಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.
ಕಳೆದ ಐದು ತಿಂಗಳಿನಿಂದ ನಡೆದ ಸರಣಿ ರೈಲು ಅಪಘಾತಗಳಿಂದಾಗಿ ಇತ್ತೀಚೆಗಷ್ಟೇ ರೈಲ್ವೇ ಸಟಿವ ಸುರೇಶ್ ಪ್ರಭು ಅವರು ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜಿನಾಮೆ ಪತ್ರ ನೀಡಿದ್ದರು. ಆದರೆ ಈ ರಾಜಿನಾಮೆಯನ್ನು ಅಂಗೀಕರಿಸದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ದಿನ ಕಾಯುವಂತೆ ತಿಳಿ ಹೇಳಿದ್ದರು. ಇದೀಗ ನಾಲ್ವರು ಸಚಿವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ನೀಡಲಾಗಿದ್ದು, 9 ಮಂದಿ ನೂತನ ಸಚಿವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ.
ಹೀಗಾಗಿ ಪ್ರಧಾನಿ ಮೋದಿ ಖಾತೆ ಹಂಚಿಕೆ ವಿಚಾರ ಇದೀಗ ತೀವ್ರ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.